ಬಳ್ಳಾರಿ: ಲೋಕಸಭಾ ಸಮರ ಮುಗಿದ ಬೆನ್ನಲ್ಲೇ ಸ್ಥಳೀಯ ಸಂಸ್ಥೆಗಳ ಚುನಾವಣಾ ಕಾವು ಜೋರಾಗಿದೆ. ಜಿಲ್ಲೆಯ ಪುರಸಭೆ ಹಾಗೂ ಪಟ್ಟಣ ಪಂಚಾಯತ್ನ ಗದ್ದುಗೆ ಏರಲು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ತೀವ್ರ ಪೈಪೋಟಿ ನಡೆಸಿವೆ. ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಬಿಜೆಪಿ ಸಹ ಈ ಚುನಾವಣೆಯಲ್ಲೂ ಭರ್ಜರಿ ಹೋರಾಟ ನಡೆಸಿದೆ.
ಸಂಡೂರು, ಹೂವಿನ ಹಡಗಲಿ ಪುರಸಭೆ ಹಾಗೂ ಕಮಲಾಪುರ ಪಟ್ಟಣ ಪಂಚಾಯತ್ ಕಾಂಗ್ರೆಸ್ ಪಕ್ಷದ ತೆಕ್ಕೆಯಲ್ಲಿದ್ದರೆ, ಹರಪನಹಳ್ಳಿ ಪುರಸಭೆ ಬಿಜೆಪಿ ತೆಕ್ಕೆಯಲ್ಲಿದೆ. ಹೇಗಾದರೂ ಮಾಡಿ ಈ ಬಾರಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಾದ್ರೂ ತನ್ನ ಅಧಿಪತ್ಯ ಮುಂದುವರಿಸಬೇಕೆಂಬ ಹಂಬಲ ಕಾಂಗ್ರೆಸ್ ಪಕ್ಷದ್ದು. ಆದರೆ, ಬಿಜೆಪಿ ಮಾತ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಲ್ಲ ವಾರ್ಡ್ಗಳಲ್ಲೂ ತನ್ನ ಅಧಿಪತ್ಯ ಸಾಧಿಸಬೇಲು ಪಣ ತೊಟ್ಟಿದೆ. ಆ ಕಾರಣಕ್ಕಾಗಿಯೇ ಮೊಳಕಾಲ್ಮೂರು ಶಾಸಕ ಬಿ. ಶ್ರೀರಾಮುಲು ನೇರವಾಗಿ ಅಖಾಡಕ್ಕಿಳಿದಿದ್ದಾರೆ. ಆಯಾ ಪುರಸಭೆ ವ್ಯಾಪ್ತಿಯಲ್ಲಿ ರೋಡ್ ಶೋ ಮತ್ತು ಮನೆ ಮನೆಗೆ ತೆರಳಿ ಮತಯಾಚನೆ ಮಾಡುವ ಮೂಲಕ ವಿಶೇಷ ಗಮನ ಸೆಳೆದಿದ್ದಾರೆ. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಿಂದ ಯಾರೊಬ್ಬರೂ ಮತಪ್ರಚಾರಕ್ಕೆ ಬಾರದಿರುವುದು ಉಭಯ ಪಕ್ಷಗಳ ಅಭ್ಯರ್ಥಿಗಳಲ್ಲಿ ತಲ್ಲಣ ಮೂಡಿಸಿದೆ.
ಈ ಬಾರಿಯ ಚುನಾವಣೆಯಲ್ಲಿ 85- ಕಾಂಗ್ರೆಸ್, 83 - ಬಿಜೆಪಿ, 31- ಜೆಡಿಎಸ್, 1- ಬಿಎಸ್ ಪಿ ಹಾಗೂ 70- ಪಕ್ಷೇತರರು ಸೇರಿದಂತೆ 270 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 92 ವಾರ್ಡ್ಗಳಿಗೆ ಮೇ. 29 ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಹೂವಿನ ಹಡಗಲಿ ಪುರಸಭೆ ವ್ಯಾಪ್ತಿಯ 19 ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ನಾಮಪತ್ರ ಹಿಂಪಡೆದಿರುವುದರಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜಿಲ್ಲೆಯ ಹೂವಿನಹಡಗಲಿ ಪುರಸಭೆಯಲ್ಲಿ 24,676 ಹಾಗೂ ಕಮಲಾಪುರ ಪಟ್ಟಣ ಪಂಚಾಯಯತ್ನಲ್ಲಿ 20,649, ಸಂಡೂರು ಪುರಸಭೆಯಲ್ಲಿ 30, 876 ಮತ್ತು ಹರಪನಹಳ್ಳಿ ಪುರಸಭೆಯಲ್ಲಿ 39,420 ಸೇರಿದಂತೆ ಒಟ್ಟಾರೆಯಾಗಿ ಸುಮಾರು 1,15, 621 ಮತದಾರರು ಈ 4 ಸ್ಥಳೀಯ ಸಂಸ್ಥೆಗಳಲ್ಲಿ ಇದ್ದಾರೆ. ಅಲ್ಲದೇ, ಹಡಗಲಿ ಪುರಸಭೆಯಲ್ಲಿ ಪದವೀಧರೆ, ಅಂಗನವಾಡಿ ಕಾರ್ಯಕರ್ತೆ ಸೇರಿ ಬಡ ಹಾಗೂ ಕೂಲಿಕಾರ್ಮಿಕರು ಈ ಬಾರಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.
ಒಟ್ಟಾರೆಯಾಗಿ ಈ ಬಾರಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಯು ವಿಶೇಷ ಹಾಗೂ ಜಿದ್ದಾಜಿದ್ದಿನ ಅಖಾಡವಾಗಿ ಮಾರ್ಪಟ್ಟಿದೆ. ಯಾವಯಾವ ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಯಲ್ಲಿ ಆಯಾ ಪಕ್ಷದಿಂದ ಎಷ್ಟು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂಬ ಮಾಹಿತಿ ಹೀಗಿದೆ :
ಕಮಲಾಪುರ ಪಟ್ಟಣ ಪಂಚಾಯಿತಿ :
ಒಟ್ಟು 20 ವಾರ್ಡ್ಗಳಿವೆ.
ಕಾಂಗ್ರೆಸ್ - 20,
ಬಿಜೆಪಿ - 18,
ಜೆಡಿಎಸ್ - 8,
ಪಕ್ಷೇತರರು - 39
ಅಂತಿಮ ಕಣದಲ್ಲಿ - 85
ಸಂಡೂರು ಪುರಸಭೆ :
ಒಟ್ಟು 23 ವಾರ್ಡ್ಗಳಿದ್ದು,
ಕಾಂಗ್ರೆಸ್ - 23,
ಬಿಜೆಪಿ - 23,
ಬಿಎಸ್ ಪಿ -1,