ಬಳ್ಳಾರಿ:ಜಿಲ್ಲೆಯ ಸಂಡೂರು ತಾಲೂಕಿನ ಕುರೇಕುಪ್ಪದ ಹೊಲವೊಂದರಲ್ಲಿ ಚಿರತೆ ದಾಳಿಗೆ ಕುರಿ ಸಾವನ್ನಪ್ಪಿದೆ.
ಕುರೇಕುಪ್ಪದಲ್ಲಿ ಚಿರತೆ ದಾಳಿಗೆ ಕುರಿ ಬಲಿ - ಕುರಿ, ಚಿರತೆ ದಾಳಿಗೆ ಬಲಿಯಾಗಿದೆ
ಬಳ್ಳಾರಿಯ ಜಿಲ್ಲೆಯಲ್ಲಿ ಚಿರತೆ ದಾಳಿಗೆ ಕುರಿ ಬಲಿಯಾಗಿದೆ. ಸಂಡೂರು ತಾಲೂಕಿನ ಕುರೇಕುಪ್ಪದ ಹೊಲವೊಂದರಲ್ಲಿ ಕುರಿ ಸಾವನ್ನಪ್ಪಿದೆ.

ಕುರಿ ಬಲಿ!
ಕುರೇಕುಪ್ಪ ಪಟ್ಟಣದ ನಿವಾಸಿ ಎ.ಡಿ. ಕೃಷ್ಣಪ್ಪ ಎಂಬುವರಿಗೆ ಸೇರಿದ ಕುರಿಯು ಚಿರತೆ ದಾಳಿಗೆ ಬಲಿಯಾಗಿದೆ. ಕಳೆದೊಂದು ವಾರದಲ್ಲಿ ಅಂದಾಜು ನಾಲ್ಕು ಕುರಿಗಳು ಚಿರತೆ ದಾಳಿಗೆ ಬಲಿಯಾಗಿವೆ ಎಂದು ಕೃಷ್ಣಪ್ಪ ತಿಳಿಸಿದ್ದಾರೆ.
ನಾನು ಬಡವ, ಕುರಿಗಳ ಸಾಕಾಣಿಕೆಯಿಂದಲೇ ನನ್ನ ಜೀವನ ಸಾಗುತ್ತಿದೆ ಎಂದು ಕೃಷ್ಣಪ್ಪ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಪುರಸಭೆ ಸದಸ್ಯ ಹೆಚ್.ಹನುಮಂತಪ್ಪ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು, ವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.