ಬಳ್ಳಾರಿ:ಸರಕು ವಾಹನ - ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಮೂವರು ಸಾವನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಸಂಡೂರು ತಾಲೂಕಿನ ಬಾಬಯ್ಯ ಕ್ರಾಸ್ ಬಳಿ ನಡೆದಿದೆ.
ಸಂಡೂರು ಬಳಿ ಭೀಕರ ಅಪಘಾತ... ಮೂವರ ದುರ್ಮರಣ - ದೀಪಾವಳಿಯ ಪಾಢ್ಯ ದಿನ
ದೀಪಾವಳಿಯ ಪಾಢ್ಯದಂದೇ ಭೀಕರ ಅಪಘಾತ ಸಂಭವಿಸಿ ಮೂವರು ಸಾವನಪ್ಪಿರುವ ಘಟನೆ ಗಣಿನಾಡಿನಲ್ಲಿ ನಡೆದಿದೆ.
ಮೂವರ ದುರ್ಮರಣ
ಸಂಡೂರು ತಾಲೂಕಿನ ಬಾಬಯ್ಯ ಕ್ರಾಸ್ ಬಳಿ ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಘಟನೆ ನಡೆದಿದೆ.ಮೃತರನ್ನು ಬುಸ್ಸಿ (21), ದಾದಾ ಕಲಂದರ (31) ಮತ್ತು ಅಸ್ಲಾಂ (25) ಎಂದು ಗುರುತಿಸಲಾಗಿದೆ. ಪರಶುರಾಮ (28) ಮತ್ತು ಮನ್ಸೂರ್ (30) ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇರ್ಫಾನ್ (32) ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಂಡೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಈ ಕುರಿತು ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.