ಬಳ್ಳಾರಿ:ಯಾವುದೇ ಪರವಾನಗಿ ಪಡೆಯದೇ ಜಿಂದಾಲ್ ಉಕ್ಕು ಕಾರ್ಖಾನೆ ಎದುರು ಪ್ರತಿಭಟನೆ ಕೈಗೊಂಡಿದ್ದ ಕನ್ನಡಪರ ಹೋರಾಟಗಾರಿಗೆ ಸಮನ್ಸ್ ಜಾರಿಗೊಳಿಸಿದ್ದರಿಂದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿಂದು ಈ ದಿನವನ್ನು ಕರಾಳ ದಿನವನ್ನಾಗಿ ಆಚರಿಸಲಾಯಿತು.
ಕನ್ನಡಪರ ಹೋರಾಟಗಾರರಿಗೆ ಸಮನ್ಸ್: ಸಂಡೂರು ಬಳಿ ಕರಾಳ ದಿನಾಚರಣೆ
ಯಾವುದೇ ಪರವಾನಗಿ ಪಡೆಯದೇ ಜಿಂದಾಲ್ ಉಕ್ಕು ಕಾರ್ಖಾನೆ ಎದುರು ಪ್ರತಿಭಟನೆ ಕೈಗೊಂಡಿದ್ದ ಕನ್ನಡಪರ ಹೋರಾಟಗಾರಿಗೆ ಸಮನ್ಸ್ ಜಾರಿಗೊಳಿಸಿದ್ದರಿಂದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿಂದು ಈ ದಿನವನ್ನು ಕರಾಳ ದಿನವನ್ನಾಗಿ ಆಚರಿಸಲಾಯಿತು.
ಜಿಲ್ಲೆಯ ಸಂಡೂರು ತಾಲೂಕು ದಂಡಾಧಿಕಾರಿ ಕಚೇರಿಯ ಎದುರು ವಾಟಾಳ್ ನಾಗರಾಜ್ ಸಮಕ್ಷಮದಲ್ಲಿ ಹತ್ತಾರು ಕನ್ನಡಪರ ಹೋರಾಟಗಾರರು ಜಮಾಯಿಸಿ ಕೆಲಕಾಲ ತಹಸೀಲ್ದಾರ್ ಹಾಗೂ ಜಿಂದಾಲ್ ಸಮೂಹ ಸಂಸ್ಥೆಯ ವಿರುದ್ಧ ಘೋಷಣೆ ಕೂಗಿದರು. ಕಪ್ಪು ನಿಲುವಂಗಿಯನ್ನು ಧರಿಸುವ ಮುಖೇನ ವಾಟಾಳ್ ನಾಗರಾಜ್ ಗಮನ ಸೆಳೆದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ತಾಲೂಕು ದಂಡಾಧಿಕಾರಿ ನೀಡಿರುವ ಸಮನ್ಸ್ಗೆ ಕಿಂಚಿತ್ತೂ ಬೆಲೆ ಕೊಡುವುದಿಲ್ಲ. ಅವರು ಜಿಂದಾಲ್ ಸಂಸ್ಥೆಯ ಏಜೆಂಟ್ ಆಗಿ ಕೆಲಸ ಮಾಡುತ್ತಾರೆ. ನಾವು ಶಾಂತಿಯುತವಾಗಿ ಪ್ರತಿಭಟನೆ ಮಾಡಿದ್ದೇವೆ ಹೊರತು ಯಾವುದೇ ಗಲಾಟೆ ಮಾಡಿಲ್ಲ. ಕೊಲೆ ಮಾಡಿಲ್ಲ. ಆದರೆ, ತಹಸೀಲ್ದಾರ್ ನೋಟಿಸ್ ಕೊಟ್ಟಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ರಾಜ್ಯದಲ್ಲಿ ಸಾವಿರಾರು ಹೋರಾಟ ಮಾಡಿದ್ದೇವೆ, ಯಾವ ತಹಸೀಲ್ದಾರ್ ಕೂಡ ಈ ರೀತಿಯ ಆದೇಶವನ್ನು ನೀಡಿಲ್ಲ. ಆದ್ದರಿಂದ ಈ ಆದೇಶವನ್ನ ಇಲ್ಲಿ ಹರಿದು ಹಾಕುತ್ತೇನೆ ಎಂದರು.