ಬಳ್ಳಾರಿ:ಕೊರೊನಾ ವೈರಸ್ ಎಫೆಕ್ಟ್ ಎಮರ್ಜೆನ್ಸಿ ನಡುವೆಯೂ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಸಿದ್ಧಾಪುರ ಗ್ರಾಮದ ಮಲಿಯಮ್ಮ ದೇವಿ ಸನ್ನಿಧಾನದಲ್ಲಿ ಇಂದು ಎಮರ್ಜೆನ್ಸಿ ಪ್ರೇಮವಿವಾಹ ಜರುಗಿದೆ. ಕೇವಲ ನಾಲ್ಕೇ ನಿಮಿಷದಲ್ಲಿ ಈ ಮದುವೆ ಕಾರ್ಯ ಮಾಡುವ ಮೂಲಕ ಹೊಸ ದಾಖಲೆ ಬರೆದಂತಾಗಿದೆ.
ಸಿದ್ಧಾಪುರ ಗ್ರಾಮದ ರೊಹಿಣಿ(20) ಮತ್ತು ಮಧು(25) ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಮದುವೆಯಾದ ಜೋಡಿ. ಇವರಿಬ್ಬರೂ ಸಿದ್ಧಾಪುರ ಗ್ರಾಮದ ಒಂದೇ ಸಮುದಾಯಕ್ಕೆ ಸೇರಿದವರು. ಬಹಳ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಎರಡೂ ಕುಟುಂಬಗಳ ಸದಸ್ಯರೊಡಗೂಡಿ ಅತ್ಯಂತ ಸರಳ ರೀತಿಯಲ್ಲಿ ಎಮರ್ಜೆನ್ಸಿ ಮದುವೆ ನೆರವೇರಿಸಿದ್ದಾರೆ.