ಕರ್ನಾಟಕ

karnataka

ETV Bharat / state

ಗಣಿನಾಡಿನ ಕಲಾಸಂಘಗಳಿಗೆ ಆರ್ಥಿಕ ನೆರವು: 17 ಕೋಟಿ ರೂ. ಕ್ರಿಯಾಯೋಜನೆಗೆ ಸಿದ್ಧತೆ - ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಅಂದಾಜು 10 ಕೋಟಿ ರೂ. ಅನುದಾನವನ್ನು ಸಾಮಾನ್ಯ ವರ್ಗದ ಕಲಾ - ಸಂಘಗಳಿಗೆ ಮೀಸಲಿರಿಸಲಾಗಿದೆ. ಅಂದಾಜು‌ 7 ಕೋಟಿ ರೂ. ಅನುದಾನವನ್ನು ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿ ಸಮುದಾಯದ ವರ್ಗಗಳಿಗೆ ಮೀಸಲಿರಿಸಲಾಗಿದೆ ಎಂದು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ಕೆ. ರಂಗಣ್ಣನವರ್ 'ಈ ಟಿವಿ ಭಾರತ್' ಗೆ ತಿಳಿಸಿದ್ದಾರೆ.

ಗಣಿನಾಡಿನ ಕಲಾಸಂಘ
ಗಣಿನಾಡಿನ ಕಲಾಸಂಘ

By

Published : Oct 5, 2020, 8:09 PM IST

ಬಳ್ಳಾರಿ:ಮಹಾಮಾರಿ ಕೋವಿಡ್ -19 ಸೋಂಕು ಹರಡುವಿಕೆಯಿಂದ ಉದ್ಭವಿಸಿದ ಸಂಕಷ್ಟದ ಹಿನ್ನೆಲೆಯಲ್ಲಿ ಗಣಿನಾಡಿನ ಕಲಾ-ಸಂಘಗಳಿಗೆ ಆರ್ಥಿಕ ನೆರವು ನೀಡುವ ಸಲುವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಂದಾಜು 17 ಕೋಟಿ ರೂ. ಅನುದಾನದ ಕ್ರಿಯಾ - ಯೋಜನೆಯ ತಯಾರಿ ನಡೆಸಿದೆ.

2019-20ನೇ ಸಾಲಿನಲ್ಲಿ ಕೋವಿಡ್ - 19 ಸೋಂಕು ಹರಡುವಿಕೆಯಿಂದ ಗಣಿ ಜಿಲ್ಲೆಯಲ್ಲಿನ ಬಡ ಕಲಾ- ಸಂಘಗಳು ಅನುದಾನದ ಕೊರತೆಯನ್ನು ಎದುರಿಸುತ್ತಿವೆ.‌ ಈ ಆರ್ಥಿಕ ಸಂಕಷ್ಟದ ನಿವಾರಣೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕ್ರಿಯಾ - ಯೋಜನೆಯನ್ನು ತಯಾರಿಸಲಾಗಿದೆ. ಅಂದಾಜು 10 ಕೋಟಿ ರೂ. ಅನುದಾನವನ್ನು ಸಾಮಾನ್ಯ ವರ್ಗದ ಕಲಾ - ಸಂಘಗಳಿಗೆ ಮೀಸಲಿರಿಸಲಾಗಿದೆ. ಅಂದಾಜು‌ 7 ಕೋಟಿ ರೂ. ಅನುದಾನವನ್ನು ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿ ಸಮುದಾಯದ ವರ್ಗಗಳಿಗೆ ಮೀಸಲಿರಿಸಲಾಗಿದೆ ಎಂದು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ಕೆ.ರಂಗಣ್ಣನವರ್ 'ಈ ಟಿವಿ ಭಾರತ್' ಗೆ ತಿಳಿಸಿದ್ದಾರೆ.

ಈ ಟಿವಿ ಭಾರತ್'ನೊಂದಿಗೆ ಮಾತನಾಡಿದ ಸಿದ್ದಲಿಂಗೇಶ ಕೆ.ರಂಗಣ್ಣನವರ್

ಜಿಲ್ಲೆಯ ನೂರಾರು ಕಲಾ- ಸಂಘಗಳ ಬಡ ಕಲಾವಿದರಿಗೆ ಈಗಾಗಲೇ ಅಂದಾಜು 2000 ರೂ. ಧನ ಸಹಾಯ ನೀಡಲಾಗಿದ್ದು, ಕಲಾವಿದರಿಗೆಲ್ಲರಿಗೂ ಮಾಸಾಶನ ನೀಡಲಾಗಿದೆ. ಇದಲ್ಲದೇ, ಕಲಾವಿದರು ಮೃತಪಟ್ಟರೆ, ವಿಧವೆಯರಿಗೂ ಕೂಡ ಮಾಸಾಶನ‌ ನೀಡಲಾಗುತ್ತಿದೆ ಎಂದು ಸಿದ್ದಲಿಂಗೇಶ ತಿಳಿಸಿದ್ದಾರೆ.

ABOUT THE AUTHOR

...view details