ಬಳ್ಳಾರಿ: ಜಿಲ್ಲೆಯ ಕಂಪ್ಲಿ ತಾಲೂಕಿನ ಸುಗ್ಗೇನಹಳ್ಳಿಯಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹವನ್ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಡೆದಿದೆ.
ಬಾಲ್ಯ ವಿವಾಹ ತಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ! - ಕಂಪ್ಲಿ ತಾಲೂಕು ವ್ಯಾಪ್ತಿಯಲ್ಲಿ ಬಾಲ್ಯ ವಿವಾಹ ಪ್ರಕರಣ
ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕು ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಬಾಲ್ಯವಿವಾಹವೊಂದನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಡೆದಿದೆ.
![ಬಾಲ್ಯ ವಿವಾಹ ತಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ! ballari-dist-kampli-taluk-child-marriage-stopped-news](https://etvbharatimages.akamaized.net/etvbharat/prod-images/768-512-7122632-thumbnail-3x2-child.jpg)
ಸುಗ್ಗೇನಹಳ್ಳಿ ಗ್ರಾಮದ ನಿವಾಸಿ ದೊಡ್ಡಬಸಪ್ಪ ಹಾಗೂ ಮೃತ ಗಂಗಮ್ಮ ದಂಪತಿಯ 17 ವರ್ಷದ ಪುತ್ರಿಗೆ ಹೊಸದರೋಜಿ ಗ್ರಾಮದ 21 ವರ್ಷದ ಯುವಕನ ಜೊತೆ ವಿವಾಹ ನಿಶ್ಚಯವಾಗಿತ್ತು. ಬಾಲ್ಯ ವಿವಾಹ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ತಂಡ ದಾಳಿ ನಡೆಸಿ ಬಾಲಕಿಯನ್ನು ರಕ್ಷಣೆ ಮಾಡಿದ್ದಲ್ಲದೇ, ಆಕೆಯನ್ನ ಬಳ್ಳಾರಿಯ ಶಾಂತಿಧಾಮದಲ್ಲಿ ಸುರಕ್ಷಿತವಾಗಿಡಲಾಗಿದೆ ಎಂದು ಡಿಡಿ ಬಿ.ಆರ್.ನಾಗರಾಜ ತಿಳಿಸಿದ್ದಾರೆ.
ಅಲ್ಲದೇ, ಬಾಲ್ಯ ವಿವಾಹ ಮಾಡೋದು ಕಾನೂನು ರೀತಿಯ ಅಪರಾಧ, ಹಾಗೂ ಅದಕ್ಕೆ ಕಾನೂನಿನಲ್ಲಿ ಏನೇನು ಶಿಕ್ಷೆಯಿದೆ ಎಂಬುದರ ಕುರಿತು ಉಭಯ ಕುಟುಂಬದವರಿಗೆ ತಿಳಿವಳಿಕೆ ನೀಡಲಾಗಿದೆ ಎಂದ್ರು.