ಕರ್ನಾಟಕ

karnataka

ETV Bharat / state

ಕೊರೊನಾ ವೈರಸ್ ಹರಡದಂತೆ ಜನಜಾಗೃತಿ ಕಾರ್ಯಕ್ರಮ: ಡಿಸಿ‌ ನಕುಲ್ ಚಾಲನೆ

ಕೊರೊನಾ ವೈರಸ್ ಹರಡುವ ಭೀತಿ‌ಯಿಂದ ಗಣಿನಗರಿ ಬಳ್ಳಾರಿಯಲ್ಲಿ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದ್ದು, ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಎಲ್​ಇಡಿ ಪರದೆಯುಳ್ಳ ವಾಹನದ ಮೂಲಕ ನಗರದಲ್ಲಿ ಜನಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದರು.

corona-virus
ಕೊರೊನಾ ವೈರಸ್ ಹರಡದಂತೆ ಜನಜಾಗೃತಿ ಕಾರ್ಯಕ್ರಮ

By

Published : Mar 6, 2020, 5:12 PM IST

ಬಳ್ಳಾರಿ:ಕೊರೊನಾ ವೈರಸ್ ಹರಡುವ ಭೀತಿ‌ಯಿಂದ ಗಣಿನಗರಿ ಬಳ್ಳಾರಿಯಲ್ಲಿ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದ್ದು, ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಎಲ್​ಇಡಿ ಪರದೆಯುಳ್ಳ ವಾಹನದ ಮೂಲಕ ನಗರದಲ್ಲಿ ಜನಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದರು.

ಕೊರೊನಾ ವೈರಸ್ ಹರಡದಂತೆ ಜನಜಾಗೃತಿ ಕಾರ್ಯಕ್ರಮ

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜನಜಾಗತಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈವರೆಗೂ ಕೊರೊನಾ ವೈರಸ್​ ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗಿಲ್ಲ. ಈಗಾಗಲೇ ಹಂಪಿ, ಜಿಂದಾಲ್​ನಂತಹ ಪ್ರಮುಖ ಸ್ಥಳಗಳಲ್ಲಿ ನಿಗಾ ವಹಿಸಲಾಗಿದೆ. ಯಾರೂ ಆತಂಕಕ್ಕೊಳಗಾಗುವುದು ಬೇಡ ಎಂದರು.

ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿರುವ ಸ್ಪಂದನಾ ಕೇಂದ್ರದಲ್ಲಿ ಕೊರೊನಾ ವೈರಸ್​ ತಡೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ವೈರಸ್ ಪತ್ತೆಯಾದ ಪ್ರಕರಣಗಳು ತಿಳಿದರೆ ಕೂಡಲೇ ಸಾರ್ವಜನಿಕರು ಈ ಕೆಳಗಿನ ದೂರವಾಣಿ ಸಂಖೆಗೆ ಕರೆ ಮಾಡಿ ಎಂದು ತಿಳಿಸಿದ್ದಾರೆ.

8277888866/ 08392- 277100,

TOLL FREE NUMBER 1077

ABOUT THE AUTHOR

...view details