ಬಳ್ಳಾರಿ:ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರಿಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ವಹಿಸಬೇಕೆಂದು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಒತ್ತಾಯಿಸಿದ್ದಾರೆ.
ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆಗೆ ಶಾಸಕ ಸೋಮಶೇಖರ ರೆಡ್ಡಿ ಒತ್ತಾಯ - ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ
ಬಳ್ಳಾರಿ ಹಾಲಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ್ ಸವದಿ ಅವರು ಬೆಳಗಾವಿಯಿಂದ ಬಳ್ಳಾರಿಗೆ ಬರಲು ತೊಂದರೆಯಾಗುತ್ತೆ. ಹಾಗಾಗಿ, ಜಿಲ್ಲಾ ಉಸ್ತುವಾರಿ ಸ್ಥಾನವನ್ನು ಸಚಿವ ಶ್ರೀರಾಮುಲು ಅವರಿಗೆ ವಹಿಸಬೇಕೆಂದು ಶಾಸಕ ಗಾಲಿ ಸೋಮಶೇಖರ ರೆಡ್ಡಿ ಒತ್ತಾಯಿಸಿದ್ದಾರೆ.
ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದ ನಿಮಿತ್ತ ವಾಲ್ಮೀಕಿ ಪುತ್ಥಳಿಗೆ ಮಾರ್ಲಾಪಣೆ ಬಳಿಕ ಅವರು ಮಾತನಾಡಿದರು. ಹಾಲಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ್ ಸಂಗಪ್ಪ ಸವದಿ ಅವರು ಬೆಳಗಾವಿಯಿಂದ ಬಳ್ಳಾರಿಗೆ ಬರಲು ತೊಂದರೆಯಾಗುತ್ತೆ. ಹಾಗಾಗಿ, ಜಿಲ್ಲಾ ಉಸ್ತುವಾರಿ ಸ್ಥಾನವನ್ನು ಸಚಿವ ಶ್ರೀರಾಮುಲುಗೆ ವಹಿಸಬೇಕೆಂದರು.
ಸಚಿವ ಬಿ.ಶ್ರೀರಾಮುಲು ಅವರನ್ನ ಉಪಮುಖ್ಯಮಂತ್ರಿ ಮಾಡ್ತೀವಿ ಅಂತಾ ಅಮಿತ್ ಶಾ ಘೋಷಣೆ ಮಾಡಿದ್ರು. ಆದ್ರೆ ಯಾಕೆ ತಡೆಹಿಡಿಯಲಾಯ್ತು ಅನ್ನೋದು ಗೊತ್ತಿಲ್ಲ. ಈ ಬಗ್ಗೆ ನಮಗೆ ತುಂಬಾ ಬೇಸರವಾಗಿದೆ. ಈ ಬಗ್ಗೆ ಜಿಲ್ಲೆಯ ಎಲ್ಲ ಶಾಸಕರು ಹೋಗಿ ಮನವಿ ಮಾಡ್ತೇವೆ. ಜಿಲ್ಲೆಯ ಅಭಿವೃದ್ಧಿಯಾಗಲು ಶ್ರೀರಾಮುಲುಗೆ ಬಳ್ಳಾರಿ ಉಸ್ತುವಾರಿ ನೀಡಬೇಕೆಂದು ಸೋಮಶೇಖರ್ ರೆಡ್ಡಿ ಹೇಳಿದ್ರು.