ಬಳ್ಳಾರಿ:108 ಆಂಬ್ಯುಲೆನ್ಸ್ ವಾಹನದ ಮಾದರಿಯಲ್ಲೇ 104 ಮಾದರಿಯ ಸಂಚಾರಿ ವೈದ್ಯಕೀಯ ವಾಹನಗಳ ಯೋಜನೆ ಜಾರಿಯಾಗಲಿ ಎಂದು ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಮನವಿ ಮಾಡಿದ್ದಾರೆ.
104 ಮಾದರಿಯ ಸಂಚಾರಿ ವೈದ್ಯಕೀಯ ವಾಹನಗಳ ಸೌಲಭ್ಯದ ಯೋಜನೆ ತರಲು ಸೋಮಶೇಖರ ರೆಡ್ಡಿ ಮನವಿ - ಸಂಚಾರಿ ವೈದ್ಯಕೀಯ ವಾಹನ
ನೆರೆಯ ಆಂಧ್ರ ಪ್ರದೇಶದಲ್ಲಿ ಈಗಾಗಲೇ 104 ಮಾದರಿಯ ಸಂಚಾರಿ ವೈದ್ಯಕೀಯ ವಾಹನಗಳ ಸೌಲಭ್ಯ ಚಾಲ್ತಿಯಲ್ಲಿದ್ದು, ಅದೇ ಮಾದರಿಯಲ್ಲೇ ಕರ್ನಾಟಕದಲ್ಲೂ ಈ 104 ಮಾದರಿಯ ವೈದ್ಯಕೀಯ ಸೌಲಭ್ಯದ ವಾಹನಗಳನ್ನು ತರಬೇಕು ಎಂದು ಶಾಸಕ ಸೋಮಶೇಖರ ರೆಡ್ಡಿ, ಸಚಿವ ಶ್ರೀರಾಮುಲುಗೆ ಮನವಿ ಮಾಡಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಬಳ್ಳಾರಿಯ ಜಿಲ್ಲಾಸ್ಪತ್ರೆ ಆವರಣದಲ್ಲಿ ನಡೆದ ರೋಟಾ ವೈರಸ್ ಲಸಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೆರೆಯ ಆಂಧ್ರ ಪ್ರದೇಶದಲ್ಲಿ ಈಗಾಗಲೇ 104 ಮಾದರಿಯ ಸಂಚಾರಿ ವೈದ್ಯಕೀಯ ವಾಹನಗಳ ಸೌಲಭ್ಯ ಚಾಲ್ತಿಯಲ್ಲಿದೆ. ಅದೇ ಮಾದರಿಯಲ್ಲೇ ಕರ್ನಾಟಕದಲ್ಲೂ ಈ 104 ಮಾದರಿಯ ವೈದ್ಯಕೀಯ ಸೌಲಭ್ಯದ ವಾಹನಗಳನ್ನು ತರಬೇಕು ಎಂದರು.
ಯಾವ ರೀತಿಯಾಗಿ 108 ಆಂಬ್ಯುಲೆನ್ಸ್ ವಾಹನಗಳು ಹಳ್ಳಿ ಹಳ್ಳಿ ಸಂಚರಿಸಿ, ತುರ್ತು ವೈದ್ಯಕೀಯ ಚಿಕಿತ್ಸೆಗೆ ನೆರವಾಗುತ್ತಿದೆಯೋ ಅದೇ ಮಾದರಿಯಲ್ಲೇ ಈ ವೈದ್ಯಕೀಯ ಸೌಲಭ್ಯದ ವಾಹನಗಳು ನೆರವಾಗಲಿವೆ. ಅಲ್ಲದೇ, ಈ ಸಂಚಾರಿ ವೈದ್ಯಕೀಯ ವಾಹನಗಳಲ್ಲಿ ಅಗತ್ಯ ವೈದ್ಯರು, ಸ್ಟಾಪ್ ನರ್ಸ್ಗಳನ್ನೂ ನಿಯೋಜಿಸಿ ಹಳ್ಳಿ ಹಳ್ಳಿಗಳಲ್ಲಿ ಸಂಚರಿಸುವಂತೆ ನೋಡಿಕೊಳ್ಳಬೇಕು. ಕೂಡಲೇ ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ಈ ಮಾದರಿಯ ವಾಹನಗಳ ಸೌಲಭ್ಯವನ್ನು ಅನುಷ್ಠಾನಗೊಳಿಸಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರಲ್ಲಿ ಶಾಸಕ ಸೋಮಶೇಖರ ರೆಡ್ಡಿ ಮನವಿ ಮಾಡಿಕೊಂಡಿದ್ದಾರೆ.