ಕರ್ನಾಟಕ

karnataka

ETV Bharat / state

'ಕಸ ಎತ್ತೋಕೆ ಪಾಲಿಕೆ ಸಿಬ್ಬಂದಿ ಕಾಯೋದು ಬ್ಯಾಡ, ನಾವೇ ಆ ಕೆಲಸ ಮಾಡೋಣ' - ಮಕ್ಕಳ ದೌರ್ಜನ್ಯ ಪ್ರಕರಣ

ಮನೆಯಂಗಳ ಹಾಗೂ ಕಚೇರಿ ಅಂಗಳದಲ್ಲಿನ ಕಸ ಎತ್ತೋಕೆ ಮಹಾನಗರ ಪಾಲಿಕೆ ಸಿಬ್ಬಂದಿ ಕಾಯೋದು ಬ್ಯಾಡ. ನಾವೇ ಅಂಗಳಕ್ಕೆ ಇಳಿಯಬೇಕು.‌ ಅದರಲ್ಲಿ ತಪ್ಪೇನಿಲ್ಲ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರ್ಜುನ್ ಎಸ್.ಮಲ್ಲೂರ್ ಅಭಿಪ್ರಾಯಪಟ್ಟಿದ್ದಾರೆ.

ಅರ್ಜುನ್ ಎಸ್.ಮಲ್ಲೂರ್

By

Published : Nov 14, 2019, 6:19 PM IST

ಬಳ್ಳಾರಿ: ಮನೆಯಂಗಳ ಹಾಗೂ ಕಚೇರಿ ಅಂಗಳದಲ್ಲಿನ ಕಸ ಎತ್ತೋಕೆ ಮಹಾನಗರ ಪಾಲಿಕೆ ಸಿಬ್ಬಂದಿ ಕಾಯೋದು ಬ್ಯಾಡ. ನಾವೇ ಅಂಗಳಕ್ಕೆ ಇಳಿಯಬೇಕು.‌ ಅದರಲ್ಲಿ ತಪ್ಪೇನಿಲ್ಲ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರ್ಜುನ್ ಎಸ್. ಮಲ್ಲೂರ್ ಅಭಿಪ್ರಾಯಪಟ್ಟಿದ್ದಾರೆ.

ಮಕ್ಕಳ ದಿನಾಚರಣೆ

ಜಿಲ್ಲೆಯ ರೇಡಿಯೋ ಪಾರ್ಕ್​ನಲ್ಲಿರೋ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ (ಡಯಟ್) ಸಭಾಂಗಣದಲ್ಲಿಂದು ನಡೆದ ಚೈಲ್ಡ್ ಲೈನ್ ಸೇ ದೋಸ್ತಿ ಮತ್ತು ಮಕ್ಕಳ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲಾ ನ್ಯಾಯಾಲಯದ ಆವರಣದಲ್ಲಿನ ತ್ಯಾಜ್ಯದ ರಾಶಿ ಎತ್ತಲು ಮಹಾನಗರ ಪಾಲಿಕೆ ಸಿಬ್ಬಂದಿಗಾಗಿ ಕಾಯುತ್ತಾ ಕುಳಿತಿರೋದನ್ನ ಪ್ರಶ್ನಿಸಿ, ಇದು ನಮ್ಮ ಆವರಣ.‌ ನಾವೇ ಅಂಗಳಕ್ಕಿಳಿದು ಶುಚಿತ್ವಗೊಳಿಸಿದ್ರೆ ತಪ್ಪೇನಿಲ್ಲ. ಅವರನ್ನ ಯಾಕೆ ಕಾಯಬೇಕೆಂದು ತಿಳಿಸಿ ನಾನೇ ಸ್ವತಃ ಅಂಗಳಕ್ಕಿಳಿದೆ ಎಂದರು.

ಆಗ ನನ್ನ ನೋಡಿ ಎಲ್ರೂ ಅಂಗಳಕ್ಕಿಳಿದು ಶುಚಿಗೊಳಿಸಿದ್ರು. ಇಂತಹ ಜಾಗೃತಿ ಮೂಡಿಸುವ ಸಂದರ್ಭ ಉಪದೇಶ ಮಾಡೋನೇ ಫೀಲ್ಡ್​ಗೆ ಇಳಿಯಬೇಕು. ನಮ್ಮ ಮನೆಯ ಪರಿಸರ ಉತ್ತಮವಾಗಿದ್ದರೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ನಾವು ಸದೃಢರಾಗಿರಬಹುದು ಎಂದರು.

ABOUT THE AUTHOR

...view details