ಕರ್ನಾಟಕ

karnataka

ETV Bharat / state

ಕಂಕಣ ಸೂರ್ಯ ಗ್ರಹಣ: ಎಕ್ಕದ ಗಿಡಕ್ಕೆ ಅರಿಶಿಣ ಕಟ್ಟಿದ ಬಳ್ಳಾರಿ ಜನ! - ಜ್ಯೋತಿಷಿಗಳ ಅಣತಿಯಂತೆ ಎಕ್ಕಡ ಗಿಡಕ್ಕೆ ಅರಿಶಿನ ಕಟ್ಟಿದ ಬಳ್ಳಾರಿ ಜನತೆ

ಈ ವರ್ಷದ ಕೊನೆಯ ಸೂರ್ಯಗ್ರಹಣ ಇಂದು ಸಂಭವಿಸುತ್ತಿದ್ದು, ಕೆಲವು ಜನರು ಮನೆಯಿಂದ ಹೊರಬರುತ್ತಿಲ್ಲ. ಬಳ್ಳಾರಿಯ ಜನತೆ ಇನ್ನು ಒಂದು ಹೆಜ್ಜೆ ಮುಂದೆ ಹೋಗಿದ್ದು, ಜ್ಯೋತಿಷಿಗಳ ಅಣತಿಯಂತೆ ಎಕ್ಕದ ಗಿಡಕ್ಕೆ ಅರಿಶಿಣ ಕಟ್ಟಿದ್ದಾರೆ.

background-of-the-solar-eclipse-ballary-people-special-pooja-to-plant
ಕಂಕಣ ಸೂರ್ಯಗ್ರಹಣದ ಹಿನ್ನೆಲೆ ಗಣಿನಾಡಿನ ಜನರ ಆಚರಣೆ

By

Published : Dec 26, 2019, 10:47 AM IST

ಬಳ್ಳಾರಿ:ಕಂಕಣ ಸೂರ್ಯಗ್ರಹಣದ ಹಿನ್ನಲೆಯಲ್ಲಿ ಬುಧವಾರ ಮಧ್ಯೆರಾತ್ರಿಯೇ ಎಕ್ಕದ ಗಿಡಕ್ಕೆ ಅರಿಸಿಣ ಬೇರು ಕಟ್ಟುವ‌ ಮೂಲಕ ಇಲ್ಲಿನ ಜನರು ಮೌಢ್ಯಾಚಾರಣೆಯಲ್ಲಿ ತೊಡಗಿದ್ದಾರೆ. ಜಿಲ್ಲೆಯ ನಾನಾ ತಾಲೂಕಿನ ಜನ ಜ್ಯೋತಿಷಿಗಳು ಹಾಗೂ ಪಂಚಾಂಗದ ಮೊರೆ ಹೋಗಿದ್ದಾರೆ. ಇನ್ನು ಶಾಲಾ- ಕಾಲೇಜುಗಳಿಗೆ ಅಘೋಷಿತ ರಜೆಯನ್ನು ಘೋಷಿಸುವ ಮೂಲಕ ಸೂರ್ಯಗ್ರಹಣದ ಭಯವನ್ನು ಎದುರಿಸಿದ್ದಾರೆ.

ಕಂಕಣ ಸೂರ್ಯಗ್ರಹಣದ ಹಿನ್ನೆಲೆ ಗಣಿನಾಡಿನ ಜನರ ಆಚರಣೆ ಹೇಗಿದೆ ನೋಡಿ

ನೆರೆಯ ಆಂಧ್ರಪ್ರದೇಶ ಮೂಲದ ಜ್ಯೋತಿಷವೋರ್ವರ ಸೂಚನೆ ಮೇರೆಗೆ ಬಳ್ಳಾರಿಯ ‌ನಾನಾ ಕಡೆಗಳಲ್ಲಿ ಬೆಳೆದು ನಿಂತಿರೊ‌ ಎಕ್ಕದ ಗಿಡಗಳಿಗೆ ಅರಿಸಿಣಕೊಂಬು ಕಟ್ಟುವ ಮೂಲಕ ವಿಶೇಷ ಪೂಜೆ ಹಾಗೂ ಪ್ರದಕ್ಷಿಣೆ‌ ಮಾಡಿ ಮತ್ತಷ್ಟು ಮೌಢ್ಯಾಚರಣೆಯಲ್ಲಿ‌‌ ಮಿಂದೆದ್ದಿದ್ದಾರೆ.

ಈ ಕಂಕಣ ಸೂರ್ಯಗ್ರಹಣದಿಂದ ಯಾರೊಬ್ಬರಿಗೂ ತೊಂದರೆಯಾಗೋದಿಲ್ಲ. ಅದೊಂದು ಸ್ವಾಭಾವಿಕ ಪ್ರಕ್ರಿಯೆ ಅಷ್ಟೇ. ಸೂರ್ಯಗ್ರಹಣವನ್ನು ನೇರವಾಗಿ ವೀಕ್ಷಣೆ ಮಾಡೋದರಿಂದ ತೊಂದರೆಯಾಗುತ್ತೆ.‌‌‌ ಕಣ್ಣಿಗೆ ಕನ್ನಡಕ ಧರಿಸಿಕೊಂಡು ವೈಜ್ಞಾನಿಕವಾಗಿ ನೋಡಬಹುದೆಂದು ವಿಜ್ಞಾನಿಗಳು ಬೊಬ್ಬೆ ಹೊಡೆದುಕೊಂಡರೂ ಕೂಡ ಜಿಲ್ಲೆಯ ಜನರು ಮಾತ್ರ ಅಂಧಾನುಕರಣೆಯಲ್ಲಿ ತೊಡಗಿರುವುದು ವಿಪರ್ಯಾಸ.

ಕರ್ಕಿ ಪ್ರೋಕ್ಷಣೆ: ಮನೆಯೊಳಗಿನ ಆಹಾರ ಪದಾರ್ಥ, ಸಂಗ್ರಹಿಸಿದ ನೀರಿನ‌ ಟ್ಯಾಂಕ್ ಹಾಗೂ ಫ್ರೀಜರ್​ಗಳಿಗೆ ಕರ್ಕಿಯನ್ನು ಪ್ರೋಕ್ಷಣೆ ಮಾಡಲಾಯಿತು.‌ ಎಲ್ಲ ಮನೆಗಳಲ್ಲೂ ಪೂಜೆ- ಪುನಸ್ಕಾರಾದಿಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ.

For All Latest Updates

ABOUT THE AUTHOR

...view details