ಹೊಸಪೇಟೆ (ವಿಜಯನಗರ): ಆಟವಾಡುತ್ತಿದ್ದಾಗ ಗಾಜಿನ ಗೋಲಿ ನುಂಗಿರುವ ಪರಿಣಾಮ ಒಂದು ವರ್ಷ ಎರಡು ತಿಂಗಳ ಮಗುವೊಂದು ಮೃತಪಟ್ಟಿರುವ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬೇವಿನಹಳ್ಳಿ ತಾಂಡದಲ್ಲಿ ನಡೆದಿದೆ.
ಮನವೀರ್ ಮೃತಪಟ್ಟಿರುವ ಮಗು. ಮನೆಯ ಮುಂದಿನ ಜಾಗದಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಗೋಲಿ ಬಾಯಲ್ಲಿ ಹಾಕಿಕೊಂಡು ಅದನ್ನ ನುಂಗಿದೆ. ಮಗುವಿನ ಗಂಟಲಿನಲ್ಲಿ ಗೋಲಿ ಇರುವುದು ಕಂಡು ಬರುತ್ತಿದ್ದಂತೆ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆದರೆ ಆ ವೇಳೆಗೆ ಮಗು ಮೃತಪಟ್ಟಿದೆ. ಮಗು ಗೋಲಿ ನುಂಗಿರುವುದನ್ನ ಆತನ ಜತೆಗಿದ್ದ ಮತ್ತೋರ್ವ ಬಾಲಕ ಗುರುತಿಸಿದ್ದನು.