ಹೊಸಪೇಟೆ: ರಸ್ತೆ ಬದಿಯಲ್ಲಿ ನಿಂತಿದ್ದ ಸಚಿವ ಶ್ರೀ ರಾಮುಲು ಪ್ರಚಾರದ ವಾಹನಕ್ಕೆ ಲಾರಿ ಡಿಕ್ಕಿಯಾಗಿರುವ ಘಟನೆ ತಾಲೂಕಿನ ನಾಗೇನ ಹಳ್ಳಿ ರಸ್ತೆಯಲ್ಲಿ ನಡೆದಿದೆ. ಆದರೆ, ರಾಮುಲು ಅವರು ಆ ವೇಳೆ ಕಾರಿನಲ್ಲಿ ಇರಲಿಲ್ಲ.
ರಾಮುಲು ಪ್ರಚಾರದ ಕಾರಿಗೆ ಲಾರಿ ಡಿಕ್ಕಿ, ಸ್ವಲ್ಪ ಸಮಯದ ಹಿಂದೆ ಅದೇ ಕಾರಿನಿಂದ ಇಳಿದಿದ್ದ ಸಚಿವ! - ವಿಜಯನಗರ ಉಪ ಚುನಾವಣೆ
ರಸ್ತೆ ಬದಿಯಲ್ಲಿ ನಿಂತಿದ್ದ ಸಚಿವ ಶ್ರೀ ರಾಮುಲು ಪ್ರಚಾರದ ವಾಹನಕ್ಕೆ ಲಾರಿ ಡಿಕ್ಕಿಯಾಗಿರುವ ಘಟನೆ ತಾಲೂಕಿನ ನಾಗೇನ ಹಳ್ಳಿ ರಸ್ತೆಯಲ್ಲಿ ನಡೆದಿದೆ. ಆದರೆ, ರಾಮುಲು ಅವರು ಆ ವೇಳೆ ಕಾರಿನಲ್ಲಿ ಇರಲಿಲ್ಲ.
ಬಿ.ಶ್ರೀರಾಮುಲು ಪ್ರಚಾರದ ಕಾರಿಗೆ ಲಾರಿ ಡಿಕ್ಕಿ
ವಿಜಯನಗರ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿ ತೆರಳುವಾಗ ಈ ಅವಘಡ ಸಂಭವಿಸಿದ್ದು, ರಾಮುಲು ಅವರು ಪ್ರಚಾರ ಮುಗಿಸಿ ಕಾರಿನಿಂದ ಇಳಿದಿದ್ದರು ಎನ್ನಲಾಗಿದೆ.
ಕಾರಿನಲ್ಲಿದ್ದ ಕಾರ್ಯಕರ್ತರು ಸೇಫ್ ಆಗಿದ್ದು, ಬೆನಕಾಪುರಕ್ಕೆ ಮುಂದಿನ ಪ್ರಚಾರಕ್ಕೆ ತೆರಳಿದ್ದಾರೆ. ಈ ಸಮಯದಲ್ಲಿ ಟ್ರಾಫಿಕ್ ಜಾಮ್ ಸಹ ಉಂಟಾಗಿತ್ತು.
Last Updated : Nov 21, 2019, 9:07 PM IST