ಕರ್ನಾಟಕ

karnataka

ETV Bharat / state

ಬಳ್ಳಾರಿ: ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಭರ್ಜರಿ ತಿರಂಗ ತಯಾರಿ - Etv Bharat Kannada news

ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕಾಗಿ ಬಳ್ಳಾರಿಯ ಪ್ರತೀ ಗ್ರಾಮಗಳಿಗೂ ತಿರಂಗ ನೀಡಲು ಸ್ವಸಹಾಯ ಸಂಘದ ಸದಸ್ಯರು ಸಿದ್ಧತೆ ನಡೆಸುತ್ತಿದ್ದಾರೆ.

azadi-ka-amrith-mahothsav-making-of-tricolour-flag-in-ballary
ಬಳ್ಳಾರಿ : ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನಲೆ ಭರ್ಜರಿ ತಿರಂಗ ತಯಾರಿ

By

Published : Aug 7, 2022, 12:59 PM IST

ಬಳ್ಳಾರಿ: ಭಾರತಕ್ಕೆ ಸ್ವಾತಂತ್ರ್ಯ ದೊರಕಿ 75 ವರ್ಷಗಳಾಗುತ್ತಿದ್ದು ದೇಶಾದ್ಯಂತ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ಈ ಸಂಭ್ರಮದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಹರ್ ಘರ್ ತಿರಂಗಾ ಅಭಿಯಾನಕ್ಕೆ ಕರೆ ನೀಡಿದ್ದಾರೆ. ಪ್ರತೀ ಮನೆಯಲ್ಲೂ ತಿರಂಗ ಹಾರಿಸಲು ಸೂಚಿಸಿದ್ದಾರೆ.

ಬಳ್ಳಾರಿ : ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನಲೆ ಭರ್ಜರಿ ತಿರಂಗ ತಯಾರಿ

ಸಿರುಗುಪ್ಪ ತಾಲೂಕಿನ ಬಿಂದುಶ್ರಿ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟ ಒಕ್ಕೂಟದ ಕರೂರಿನ 5 ಸ್ವಸಹಾಯ ಗುಂಪುಗಳು ಧ್ವಜ ತಯಾರಿಕೆಯಲ್ಲಿ ತೊಡಗಿವೆ. ಒಟ್ಟು 17 ಜನ ಸದಸ್ಯರು, 12 ಗ್ರಾಮ ಪಂಚಾಯತಿಗಳಿಗೆ ಒಟ್ಟು 5400 ಬಾವುಟಗಳನ್ನು ತಯಾರಿಸುತ್ತಿದ್ದಾರೆ. ದೇಶನೂರಿನ ವಿನಾಯಕ ಸಂಜೀವಿನಿ ಒಕ್ಕೂಟದ 4 ಸ್ವಸಹಾಯ ಗುಂಪುಗಳ ಒಟ್ಟು 12 ಸದಸ್ಯರಿಂದ 8 ಗ್ರಾಮ ಪಂಚಾಯತಿಗಳಿಗೆ 3600 ಬಾವುಟಗಳನ್ನು ತಯಾರಿಸಲಾಗುತ್ತಿದೆ. ಸ್ಪೂರ್ತಿ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟ ಒಕ್ಕೂಟದ ಹಚ್ಚೋಳ್ಳಿಯ 4 ಸ್ವಸಹಾಯ ಗುಂಪುಗಳ ಒಟ್ಟು 10 ಸದಸ್ಯರಿಂದ 7 ಗ್ರಾಮ ಪಂಚಾಯತಿಗಳಿಗೆ 3,150 ಬಾವುಟಗಳನ್ನು ತಯಾರಿಸಲಾಗುತ್ತಿದೆ.

"ಸ್ವಾತಂತ್ಯೋತ್ಸವ ಅಮೃತ ಮಹೋತ್ಸವದ ಈ ಸುಸಂದರ್ಭದಲ್ಲಿ ರಾಷ್ಟ್ರಧ್ವಜ ತಯಾರಿಸುವ ಮೂಲಕ ದೇಶ ಸೇವೆಗೆ ಮತ್ತು ದೇಶಪ್ರೇಮ ಮೆರೆಯಲು ಸದಾವಕಾಶ ಸಿಕ್ಕಿರುವುದು ನಮ್ಮ ಹೆಮ್ಮೆ" ಎಂದು ರಾಷ್ಟ್ರಧ್ವಜ ತಯಾರಿಸುವ ಸದಸ್ಯರು ಹೇಳಿದ್ದಾರೆ.

ಇದನ್ನೂ ಓದಿ :ಮನೆ ಮನೆಗೆ ತೆರಳಿ ತಿರಂಗ ಹಂಚಿದ ದಾವಣಗೆರೆ ಮಾಜಿ ಮೇಯರ್

ABOUT THE AUTHOR

...view details