ಕರ್ನಾಟಕ

karnataka

ETV Bharat / state

ಸೋಂಕಿತರು ಹೆಚ್ಚಾದಂತೆ ಆಂಬ್ಯುಲೆನ್ಸ್​​​ ಸೇವೆಯ ಮೇಲೂ ತೀವ್ರ ಒತ್ತಡ

ಕೋವಿಡ್​​ ಉಲ್ಬಣಗೊಂಡಂತೆ ಆಂಬ್ಯುಲೆನ್ಸ್​ ವಾಹನಗಳ ಕಾರ್ಯವೂ ಒತ್ತಡಕ್ಕೆ ಸಿಲುಕಿದೆ. ದಿನೇ ದಿನೇ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಾ ಹೋಗಿರೋದು ಇದಕ್ಕೆ ಕಾರಣ. ಆದ್ರೆ ಈಗಿರುವ ಆಂಬ್ಯುಲೆನ್ಸ್‌ಗಳಿಗೆ ಸಕಾಲದಲ್ಲಿ ರೋಗಿಗಳಿಗೆ ಸೇವೆ ಒದಗಿಸೋದು ದೊಡ್ಡ ಸವಾಲಾಗುತ್ತಿದೆ. ಈ ಕುರಿತಾಗಿ ಇಲ್ಲಿದೆ ಒಂದು ವಿಶೇಷ ವರದಿ..

Availability of Ambulance to Covid patients
ಸೋಂಕಿತರು ಹೆಚ್ಚಾದಂತೆ ಆಂಬ್ಯುಲೆನ್ಸ್​​​ ಸೇವೆಗೂ ಹೆಚ್ಚಿತು ಒತ್ತಡ

By

Published : May 14, 2021, 6:56 AM IST

ಬಳ್ಳಾರಿ/ಮೈಸೂರು:ರಾಜ್ಯಾದ್ಯಂತ ಕೋವಿಡ್​ ಸಾವು ನೋವುಗಳ ಪ್ರಮಾಣ ಕಡಿಮೆ ಆಗಿಲ್ಲ. ಸಾಂಕ್ರಾಮಿಕ ರೋಗದ ಅಟ್ಟಹಾಸವನ್ನು ಕೊನೆ ಮಾಡುವುದಕ್ಕೆ ಇದೀಗ ಲಾಕ್ಡೌನ್‌ ವಿಧಿಸಲಾಗಿದೆ. ಇಂಥ ಸಂದರ್ಭದಲ್ಲಿ ತುರ್ತು ಕರೆ ಬಂದ ಕೂಡಲೇ ಆಂಬ್ಯುಲೆನ್ಸ್​ಗಳು ತೆರಳಿ ರೋಗಿಗಳನ್ನು ಆಸ್ಪತ್ರೆಗೆ ಕೊಂಡೊಯ್ಯುವ ಮಹತ್ವದ ಕಾರ್ಯ ಮಾಡುತ್ತಿವೆ. ಆದ್ರೀಗ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದ್ದು ನಿಗದಿತ ವೇಳೆಯಲ್ಲಿ, ನಿಗದಿತ ಆಂಬ್ಯುಲೆನ್ಸ್​​ಗಳಲ್ಲಿ ಸೇವೆ ಒದಗಿಸೋದು ಸಾಧ್ಯವಾಗುತ್ತಿಲ್ಲ.

ಸೋಂಕಿತರು ಹೆಚ್ಚಾದಂತೆ ಆಂಬ್ಯುಲೆನ್ಸ್​​​ ಸೇವೆಗೂ ಹೆಚ್ಚಿತು ಒತ್ತಡ

ಗಣಿ ಜಿಲ್ಲೆಗಳಾದ ಬಳ್ಳಾರಿ ಮತ್ತು ವಿಜಯನಗರದಲ್ಲಿ 109 ಆಂಬ್ಯುಲೆನ್ಸ್​​ಗಳಿದ್ದು, ಇವುಗಳ ಪೈಕಿ ಅಂದಾಜು 13 ಆಂಬ್ಯುಲೆನ್ಸ್​​ಗಳಲ್ಲಿ ಅತ್ಯಾಧುನಿಕ ವ್ಯವಸ್ಥೆಗಳಿವೆ. ಈ ವಾಹನಗಳಲ್ಲಿ ಹೋಮ್ ಐಸೋಲೇಷನ್​ನಲ್ಲಿರುವ ರೋಗಿಗಳ ಆರೋಗ್ಯದಲ್ಲಿ ಕೊಂಚ ಏರುಪೇರಾದ್ರೂ ಅಲ್ಲಿಗೆ ತೆರಳಿ ಅವರನ್ನು ಆಸ್ಪತ್ರೆಗೆ ಕರೆತರಲು ಸಾಧ್ಯವಾಗುತ್ತಿದೆ. ಸದ್ಯದ ಮಟ್ಟಿಗೆ ಜಿಲ್ಲೆಯಲ್ಲಿ ಆಂಬ್ಯುಲೆನ್ಸ್​​ ಕೊರತೆ ಇಲ್ಲ ಅನ್ನೋದು ಸ್ವಲ್ಪ ನೆಮ್ಮದಿ ತರಿಸುತ್ತಿದೆ.

ಮೈಸೂರಿಗೆ ಮತ್ತಷ್ಟು ಆಂಬ್ಯುಲೆನ್ಸ್​​ಗಳು ಬೇಕು. ಈ ತುರ್ತು ಸಂದರ್ಭವನ್ನೇ ಬಂಡವಾಳ ಮಾಡಿಕೊಂಡ ಕೆಲವು ಖಾಸಗಿ ಆಂಬ್ಯುಲೆನ್ಸ್​ನವರು ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಜನರಿಂದ ಹಣ ಸುಲಿಗೆ ಮಾಡುತ್ತಾರೆನ್ನುವ ಆರೋಪಗಳಿವೆ.

ಸೋಂಕಿತರ ಸಂಖ್ಯೆ ಇದೇ ರೀತಿ ಏರಿದರೆ ಪ್ರತೀ ಜಿಲ್ಲೆಯಲ್ಲೂ ಆಂಬ್ಯುಲೆನ್ಸ್​ಗಳ ಕೊರತೆ ಉದ್ಬವಿಸೋದ್ರಲ್ಲಿ ಅನುಮಾನವಿಲ್ಲ. ಪರಿಣಾಮ ಸಾವು-ನೋವಿನ ಸಂಖ್ಯೆಯೂ ಹೆಚ್ಚುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಈಗಾಗಲೇ ಬೆಡ್​, ಆಕ್ಸಿಜನ್​ ಕೊರತೆ ರಾಜ್ಯದಲ್ಲಿ ಅವಾಂತರ ಸೃಷ್ಟಿಸಿದೆ. ಹಾಗಾಗಿ ಸಾರ್ವಜನಿಕರು ಎಚ್ಚೆತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಈ ಮೂಲಕ ಸರ್ಕಾರದ ಜೊತೆ ಸಹಕರಿಸಬೇಕು.

ABOUT THE AUTHOR

...view details