ಬಳ್ಳಾರಿ: ಕೊಳಗಲ್ ಗ್ರಾಮದ ಕೃಷಿ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಆಟೋವೊಂದು ಎಚ್‌ಎಲ್‌ಸಿ ಕಾಲುವೆಗೆ ಉರುಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ನಾಗರತ್ನಮ್ಮ (18) ಮತ್ತು ಮಲ್ಲಮ್ಮ (30) ಎಂಬುವರ ಶವ ಪತ್ತೆಯಾಗಿದೆ. ಇನ್ನೊಬ್ಬರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಬಳ್ಳಾರಿ ತಾಲೂಕಿನ ಕೊಳಗಲ್ ಗ್ರಾಮದಿಂದ ಕೃಷ್ಣಾನಗರಕ್ಕೆ ಆಟೋದಲ್ಲಿ ಕೃಷಿ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿರುವಾಗ ಚಾಲಕನ ನಿಯಂತ್ರಣ ತಪ್ಪಿ ಆಟೋ ಕಾಲುವೆಗೆ ಉರುಳಿ ಬಿದ್ದಿತ್ತು. ದುರಂತದಲ್ಲಿ ಐವರು ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದ್ದು, ಮೂವರು ಕಾರ್ಮಿಕರ ಮೃತದೇಹ ಪತ್ತೆಯಾಗಿತ್ತು. ಘಟನೆ ನಡೆದ ಸ್ಥಳದಿಂದ 12 ಕಿ.ಮೀ.ದೂರದ ಬಂಡಿಹಟ್ಟಿ ಬಳಿ ನಾಗರತ್ನಮ್ಮ ಎಂಬುವರ ಮೃತದೇಹ ನಿನ್ನೆ ಸಿಕ್ಕಿತ್ತು. ಇಂದು ಬೆಳಗ್ಗೆ ಉಂತಕಲ್ ಸಮೀಪ ಮಲ್ಲಮ್ಮ ದೇಹ ಪತ್ತೆಯಾಗಿದೆ. ಲಕ್ಷ್ಮಿ ಎಂಬವರಿಗಾಗಿ ಹುಡುಕಾಟ ಮುಂದುವರೆದಿದೆ.