ಹೊಸಪೇಟೆ: ಪ್ರಯಾಣಿಕರೊಬ್ಬರು ಆಟೋದಲ್ಲಿ ಮರೆತು ಹೋಗಿದ್ದ ರೂ. 25,000 ಮೌಲ್ಯದ ಲ್ಯಾಪ್‌ಟಾಪ್ ಅನ್ನು ಚಾಲಕ ನಿನ್ನೆ ರಾತ್ರಿ ಮರಳಿ ಅವರಿಗೆ ತಲುಪಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ನಗರದ ಆಟೋ ಚಾಲಕ ಹೊನ್ನೂರಪ್ಪ ಅವರು ಪ್ರಾಮಾಣಿಕತೆ ಮೆರೆದ ವ್ಯಕ್ತಿ. ಕೆಎಲ್‌ಎಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಎನ್. ಚಮಂತಿ ಅವರು ನಗರದ ಸಂಕ್ಲಾಪುರದಿಂದ ಹೊನ್ನೂರಪ್ಪ ಅವರ ಆಟೋದಲ್ಲಿ ಬರುವಾಗ ಮರೆತು ಲ್ಯಾಪ್‌ಟಾಪ್ ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಬಳಿಕ ಅವರು ಕಳೆದುಕೊಂಡಿರುವ ಬಗ್ಗೆ ಪಟ್ಟಣ ಠಾಣೆಗೆ ದೂರು ಸಲ್ಲಿಸಿದ್ದಾರೆ.