ಬಳ್ಳಾರಿ: ಇಲ್ಲಿನ ಬ್ರೂಸ್ ಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ನಾಟಕ ಬ್ಯಾಂಕ್ ಎಟಿಎಂಗೆ ಹಣ ತುಂಬಲು ನೀಡಿದ್ದ 56.18 ಲಕ್ಷ ರೂಪಾಯಿಯನ್ನು ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಬಳ್ಳಾರಿಯ ಬ್ರೂಸ್ ಪೇಟ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನೀಲಕಂಠ ಎಂದು ಗುರುತಿಸಲಾಗಿದೆ. ಕಳೆದ ಶನಿವಾರ ಈ ಘಟನೆ ನಡೆದಿದ್ದು, ಪ್ರಕರಣ ನಡೆದ 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಬ್ರೂಸ್ ಪೇಟ್ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿ ಸಿ ಎಸ್ ಎಂ ಕಂಪನಿಯಲ್ಲಿ ಕಸ್ಟೋಡಿಯನ್ ಆಗಿ ಕೆಲಸ ಮಾಡುತ್ತಿದ್ದ. ಕಳೆದ ಶನಿವಾರದಂದು ಕರ್ಣಾಟಕ ಬ್ಯಾಂಕ್ ನವರು, ಎಟಿಎಂಗೆ ಹಣ ಹಾಕಲು ಸುಮಾರು 50.18 ಲಕ್ಷ ರೂ. ಹಣ ನೀಡಿದ್ದರು. ಹಣ ಪಡೆದ ನೀಲಕಂಠ ಎಟಿಎಂಗೆ ಹಾಕಲು ನೀಡಿದ ಹಣದ ಜೊತೆಗೆ ಎಟಿಎಂನಲ್ಲಿದ್ದ 6 ಲಕ್ಷ ರೂಪಾಯಿ ತೆಗೆದು, ಒಟ್ಟು 56.18 ಲಕ್ಷ ರೂಪಾಯಿಯೊಂದಿಗೆ ಪರಾರಿಯಾಗಿದ್ದ.