ಕರ್ನಾಟಕ

karnataka

ETV Bharat / state

ಬಳ್ಳಾರಿಯ ಸಂಗನಕಲ್ಲಿನಲ್ಲಿ ಖಗೋಳ ಪ್ರಯೋಗಾಲಯದಲ್ಲಿ ಸೂರ್ಯನ ವೀಕ್ಷಣೆ - Astronomy

ಬಳ್ಳಾರಿ ಬಳಿಯ ಸಂಗನಕಲ್ಲು ಗುಡ್ಡದ ಸಹಶಿವ ಗುಡ್ಡ, ಆನೆಸೊಂಡೆ ಗುಡ್ಡದ ಎದುರುಗಡೆ ಬಯಲು ಪ್ರದೇಶದ ನಿರ್ದಿಷ್ಟ ಸ್ಥಳದಲ್ಲಿ ಒಂದು ಕಲ್ಲು ಇದೆ. ಅಲ್ಲಿಂದ ನೋಡಿದರೆ ಬಸವಣ್ಣ ಗುಡ್ಡದ ಕಲ್ಲಿನ ತುದಿಯ ಮೇಲೆ ಸೂರ್ಯ ಉದಯವಾಗುವುದು ಕಾಣುತ್ತದೆ.

dsdd
ಬಳ್ಳಾರಿಯ ಸಂಗನಕಲ್ಲಿನಲ್ಲಿ ಖಗೋಳ ಪ್ರಯೋಗ ವೀಕ್ಷಣೆ

By

Published : Jan 4, 2021, 4:36 PM IST

ಬಳ್ಳಾರಿ: ನಗರ ಹೊರವಲಯದ ಸಂಗನಕಲ್ಲು ಗ್ರಾಮದ ಹಿಂಭಾಗದ ಜಾಗದಲ್ಲಿ ಆದಿ ಮಾನವರು ಅಂದು ವೀಕ್ಷಿಸಿದ ನಕ್ಷೇತ್ರಿಕ ದಕ್ಷಿಣಾಯನದಿಂದ ಸೂರ್ಯನು ಉತ್ತರಾಯಣಕ್ಕೆ ಚಲಿಸುವುದನ್ನು ಸಾರ್ವಜನಿಕರು ಕಣ್ತುಂಬಿಕೊಂಡರು.

ಬಳ್ಳಾರಿಯ ಸಂಗನಕಲ್ಲಿನಲ್ಲಿ ಖಗೋಳ ಪ್ರಯೋಗ ವೀಕ್ಷಣೆ

ಈ ವೇಳೆ ಈಟಿವಿ ಭಾರತದೊಂದಿಗೆ ಸಂಗನಕಲ್ಲು ಗ್ರಾಮದ ರಾಮದಾಸ್ ಮಾತನಾಡಿ, ಆದಿ ಮಾನವ ನೆಲೆಸಿದ್ದ ಸ್ಥಳಗಳಲ್ಲಿ ಅನೇಕ ಚಿತ್ರ ಲಿಪಿಗಳು ಕಾಣಸಿಗುತ್ತವೆ. ಅದರಲ್ಲಿ ಬೇಸಿಗೆ, ಮಳೆ ಹಾಗೂ ಋತು ಬದಲಾವಣೆಗಳನ್ನು ಬಿತ್ತರಿಸುವ ನಿರ್ದಿಷ್ಟ ಸ್ಥಳಗಳನ್ನು ನಿಗದಿ ಮಾಡಿದ್ದಾರೆ. ಅದರಲ್ಲಿ ಈ ಸಂಗನಕಲ್ಲು ಸಹ ಒಂದಾಗಿದೆ.

ಖಗೋಳ ವೀಕ್ಷಕರು ಹಾಗೂ ಅಧ್ಯಯನ ಮಾಡುವವರು ಆದಿ ಮಾನವನ ಪ್ರಯೋಗ ಶಾಲೆಯಂತಿರುವ ಈ ಸ್ಥಳಕ್ಕೆ ಭೇಟಿ ನೀಡಬಹುದಾಗಿದೆ. ಇದು ಶಿಲಾಯುಗದ ಪ್ರಯೋಗಾಲಯವಾಗಿದೆ. ಗ್ರಾಮದ ಹಿರೇಗುಡ್ಡದಲ್ಲಿ ಆದಿ ಮಾನವರ ಬಯಲು ಬಂಡೆ ಚಿತ್ರಗಳು, ಬೂದಿ ದಿಬ್ಬಗಳು, ಪಿಲ್ಲಪ್ಪ ದೇವಸ್ಥಾನದ ಗೂಡು, ಪಂಚಾಯಿತಿ ಕಟ್ಟೆ, ನೀರಿನ ಸಂಗ್ರಹ, ಮೀನುಗಾರಿಕೆಯ ಕುರುಹುಗಳು ಸಿಗುತ್ತವೆ ಎಂದು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details