ಕರ್ನಾಟಕ

karnataka

ETV Bharat / state

ಬಳ್ಳಾರಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಇಇ ಕೋವಿಡ್​​ಗೆ ಬಲಿ - ಬಳ್ಳಾರಿ ಜಿಲ್ಲಾ ನಗರಾಭಿವೃದ್ಧಿ ಕೋಶ ಇಇ ಕೋವಿಡ್ ಗೆ ಬಲಿ

ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಇಂಜಿನಿಯರ್ (ಇಇ) ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

assistant engineer of District Urban Development Cell Death by Corona
ಬಳ್ಳಾರಿ ಜಿಲ್ಲಾ ನಗರಾಭಿವೃದ್ಧಿ ಕೋಶ ಇಇ ಕೋವಿಡ್ ಗೆ ಬಲಿ

By

Published : May 1, 2021, 8:49 AM IST

ಬಳ್ಳಾರಿ: ಟ್ರಾಮಾ ಕೇರ್ ಸೆಂಟರ್​ನಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಇಂಜಿನಿಯರ್ (ಇಇ) ಕಾಳಪ್ಪ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

ನಗರ ಸ್ಥಳೀಯ ಸಂಸ್ಥೆಗಳ ಹಾಗೂ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಿಮಿತ್ತ ಬಳ್ಳಾರಿಯಿಂದ ಹಿಮಾಚಲ ಪ್ರದೇಶಕ್ಕೆ ಇವಿಎಂ ಮಷಿನ್​​ಗಳನ್ನ ತರಲು ಹೋಗುವಾಗ ಕೋವಿಡ್ ನೆಗೆಟಿವ್ ರಿಪೋರ್ಟ್ ಬಂದಿತ್ತು. ಹಿಮಾಚಲ ಪ್ರದೇಶದಿಂದ ಬಳ್ಳಾರಿಗೆ ಏಪ್ರಿಲ್ 16ರಂದು ವಾಪಸಾದ ಮೇಲೆ ಕೋವಿಡ್​ ಸೋಂಕು ತಗುಲಿದ್ದು, ಟ್ರಾಮಾ ಕೇರ್ ಸೆಂಟರ್​ನಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದರು. ಮಧುಮೇಹದಿಂದ ಬಳಲುತ್ತಿದ್ದ ಅವರು ನಿನ್ನೆ ಸಾವನ್ನಪ್ಪಿದ್ದಾರೆ.

ಜಿಲ್ಲಾಡಳಿತದಿಂದ ಸಂತಾಪ:ಡಿಯುಡಿಸಿ ಇಇ ಕಾಳಪ್ಪ ಅವರ ಅಕಾಲಿಕ ನಿಧನ ಹೊಂದಿರುವ ಮಾಹಿತಿ ತಿಳಿದ ಜಿಲ್ಲಾಡಳಿತ ಸಂತಾಪ ಸೂಚಿಸಿದೆ.

ಓದಿ : ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ದುರಂತ: 14 ಮಂದಿ ದುರ್ಮರಣ

For All Latest Updates

ABOUT THE AUTHOR

...view details