ಕರ್ನಾಟಕ

karnataka

ETV Bharat / state

ರಸ್ತೆ ತಡೆಗೆ ಬಳ್ಳಾರಿಯಲ್ಲಿ ಎಎಸ್​ಪಿ ಆಕ್ಷೇಪ: ಪೊಲೀಸರ ಹಾಗೂ ಕೈ ಮುಖಂಡರ ನಡುವೆ ವಾಗ್ವಾದ - Protest by congressional committee leaders

ಬಳ್ಳಾರಿ ನಗರದ ಗಡಿಗಿ ಚನ್ನಪ್ಪ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಮುಖಂಡರು ಕೈಗೊಂಡಿದ್ದ ಪ್ರತಿಭಟನೆಯ ವೇಳೆ ಜಿಲ್ಲಾ ಪೊಲೀಸರ ಹಾಗೂ ಮುಖಂಡರೊಂದಿಗೆ ಕೆಲಕಾಲ ವಾಗ್ವಾದ ನಡೆಯಿತು. ರಸ್ತೆ ತಡೆಯಲು ಕಾಂಗ್ರೆಸ್ ಕಾರ್ಯಕರ್ತರು ಮುಂದಾದಾಗ, ಸ್ಥಳಕ್ಕಾಗಮಿಸಿದ ಎಎಸ್​ಪಿ ಬಿ.ಎನ್. ಲಾವಣ್ಯ ಅವರು, ಅದನ್ನು ಕಂಡು ಆಕ್ಷೇಪ ವ್ಯಕ್ತಪಡಿಸಿದರು.

bellary
ಕಾಂಗ್ರೆಸ್ಸಿಗರ ರಸ್ತೆ ತಡೆಗೆ ಎಎಸ್​ಪಿ ಆಕ್ಷೇಪ

By

Published : Dec 8, 2020, 1:51 PM IST

ಬಳ್ಳಾರಿ:ಭಾರತ್​​ ಬಂದ್ ಹಿನ್ನೆಲೆಯಲ್ಲಿ ನಗರದ ಗಡಿಗಿ ಚನ್ನಪ್ಪ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಮುಖಂಡರು ಕೈಗೊಂಡಿದ್ದ ಪ್ರತಿಭಟನೆಯ ವೇಳೆ ಜಿಲ್ಲಾ ಪೊಲೀಸರು ಹಾಗೂ ಮುಖಂಡರೊಂದಿಗೆ ಕೆಲಕಾಲ ವಾಗ್ವಾದ ನಡೆಯಿತು.

ಕಾಂಗ್ರೆಸ್ಸಿಗರ ರಸ್ತೆ ತಡೆಗೆ ಎಎಸ್​ಪಿ ಆಕ್ಷೇಪ ವ್ಯಕ್ತಪಡಿಸಿದರು.

ವೃತ್ತದ ಎಡಬದಿಯಲ್ಲಿ ಅನಂತಪುರ ರಸ್ತೆಗೆ ಹಾದು ಹೋಗುವ ಮಾರ್ಗವನ್ನು ತಡೆಯಲು ಕಾಂಗ್ರೆಸ್ ಕಾರ್ಯಕರ್ತರು ಮುಂದಾದಾಗ, ಆಗತಾನೆ ಸ್ಥಳಕ್ಕಾಗಮಿಸಿದ ಎಎಸ್​ಪಿ ಬಿ.ಎನ್.ಲಾವಣ್ಯ ಅವರು, ಅದನ್ನು ಕಂಡು ಆಕ್ಷೇಪ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರ ಆಕ್ರೋಶ: ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ

ಕೂಡಲೇ ಅವರಿದ್ದ ಸ್ಥಳಕ್ಕೆ ಹೋಗಿ ಅಲ್ಲಿ ಕೂರಬೇಡಿ. ಇದರಿಂದ ಜನ ಸಾಮಾನ್ಯರಿಗೆ ಅಡೆತಡೆ ಉಂಟಾಗಲಿದೆ. ಗಡಿಗಿ ವೃತ್ತದ‌ ನಡುವೆ ಕುಳಿತುಕೊಂಡು ಪ್ರತಿಭಟನೆ ಮಾಡುವಂತೆ ತಾಕೀತು ಮಾಡಿದರು. ನಂತರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಿ.ಎಸ್. ಮಹಮ್ಮದ್​ ರಫೀಕ್ ಅವರು, ನಾವು ಇಲ್ಲಿ ಕುಳಿತು ಪ್ರತಿಭಟನೆಯನ್ನು ಮಾಡುತ್ತಿದ್ದೇವೆ ಹೊರತು, ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡಿಲ್ಲ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಎಎಸ್​ಪಿ ಲಾವಣ್ಯ ಅವರು, ನಾವು ಪ್ರತಿಭಟನೆ ಮಾಡೋದಕ್ಕೆ ಅಡ್ಡಿಪಡಿಸಿಲ್ಲ, ರಸ್ತೆಯಲ್ಲಿ ಕುಳಿತರೆ ವಾಹನ ಸವಾರರಿಗೆ ಸಮಸ್ಯೆ ಆಗುತ್ತೆ. ಹಾಗಾಗಿ ಗಡಿಗಿ ಚನ್ನಪ್ಪ ವೃತ್ತದ ಬಳಿ ಪ್ರತಿಭಟನೆ ನಡೆಸಿ ಎಂದು ಮನವಿ ಮಾಡಿದರು.

ABOUT THE AUTHOR

...view details