ಬಳ್ಳಾರಿ:ಆಶಾ ಕಾರ್ಯಕರ್ತೆಯರ ಮನೆಯಿಂದ ಮತ್ತು ತಮ್ಮ ಕೆಲಸದ ಸ್ಥಳದಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂದು ಆನ್‌ಲೈನ್ ಪ್ರತಿಭಟನೆ ನಡೆಸಿದರು.
ಇಂದು ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ಜಿಲ್ಲೆ/ತಾಲೂಕುನಲ್ಲಿ ಆನ್‌ಲೈನ್ ಪ್ರತಿಭಟನೆಯನ್ನು ಆಶಾ ಕಾರ್ಯಕರ್ತೆಯರು ಮನೆಗಳಿಂದ ಮತ್ತು ಅವರ ಕೆಲಸದ ಸ್ಥಳಗಳಿಂದ ನಡೆಸಿದರು.
ರಾಜ್ಯವ್ಯಾಪಿ ಹೋರಾಟದ ಕರೆಯ ಮೇರೆಗೆ ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆಯ ಫೋಟೋಗಳನ್ನು ವಿವಿಧ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಸರ್ಕಾರಕ್ಕೆ/ಇಲಾಖೆಗೆ ತಮ್ಮ ಹಕ್ಕೊತ್ತಾಯಗಳಿಗೆ ಪರಿಹಾರ ಒದಗಿಸಬೇಕೆಂದು ಗಮನ ಸೆಳೆದರು.
ಬೇಡಿಕೆಗಳು:
- 3 ತಿಂಗಳ ಬಾಕಿ ವೇತನ ಪಾವತಿಸಿ
- ಮಾಸ್ಕ್, ಸಾನಿಟೈಸರ್, ಮತ್ತು ಸುರಕ್ಷತಾ ಕಿಟ್ ಒದಗಿಸಿ
- ಕೋವಿಡ್ ಸೋಂಕಿತ ಆಶಾಗಳಿಗೆ 25,000/- ಪರಿಹಾರ
- 5ಸಾವಿರ ಮಾಸಿಕ ಕೋವಿಡ್ ಪ್ಯಾಕೇಜ್ ನೀಡಬೇಕು
ಎಂದು AIUTUC ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಡಿ.ನಾಗಲಕ್ಷ್ಮಿ ಅವರು ಹೇಳಿದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ