ಕರ್ನಾಟಕ

karnataka

ETV Bharat / state

ಹಕ್ಕೊತ್ತಾಯಗಳ ಪೂರೈಕೆಗೆ ಆಗ್ರಹಿಸಿ ಜೂನ್ 30 ರಂದು ಆಶಾ ಕಾರ್ಯಕರ್ತೆಯರ ಪ್ರತಿಭಟನೆ - Asha activists protest

ಕಳೆದ ಮೂರು ತಿಂಗಳಿಂದ ನಿರಂತರವಾಗಿ ಆಶಾ ಕಾರ್ಯಕರ್ತೆಯರು ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ‌. ಅವರಿಗೆ ಸನ್ಮಾನ, ಹೂವಿನ ಸುರಿಮಳೆ ಅಗತ್ಯವಿಲ್ಲ, ಬದಲಿಗೆ ಸರ್ಕಾರ ಸೂಕ್ತ ಭತ್ಯೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಆಗ್ರಹಿಸಿದರು.

Asha activists protest on June 30 on fulfilment of various demands
ಹಕ್ಕೋತ್ತಾಯಗಳ ಪೂರೈಕೆಗೆ ಆಗ್ರಹಿಸಿ ಜೂನ್ 30 ರಂದು ಆಶಾ ಕಾರ್ಯಕರ್ತೆಯರ ಪ್ರತಿಭಟನೆ

By

Published : Jun 28, 2020, 4:00 PM IST

ಬಳ್ಳಾರಿ:ಆಶಾ ಕಾರ್ಯಕರ್ತೆಯರಿಗೆ 12 ಸಾವಿರ ಮಾಸಿಕ ಗೌರವಧನ ಖಾತರಿಪಡಿಸಬೇಕು ಮತ್ತು ಆರೋಗ್ಯ ರಕ್ಷಣಾ ಕಿಟ್​ಗಳನ್ನು ನೀಡಬೇಕೆಂದು ಒತ್ತಾಯಿಸಿ ಜೂನ್ 30 ರಂದು ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ತಿಳಿಸಿದರು.

ಹಕ್ಕೊತ್ತಾಯಗಳ ಪೂರೈಕೆಗೆ ಆಗ್ರಹಿಸಿ ಜೂನ್ 30 ರಂದು ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಮತ್ತು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಕಳೆದ ಮೂರು ತಿಂಗಳಿಂದ ನಿರಂತರವಾಗಿ ಆಶಾ ಕಾರ್ಯಕರ್ತೆಯರು ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ‌. ಅವರಿಗೆ ಸನ್ಮಾನ, ಹೂವಿನ ಸುರಿಮಳೆ ಅಗತ್ಯವಿಲ್ಲ, ಬದಲಿಗೆ ಸರ್ಕಾರ ಅವರಿಗೆ ಸೂಕ್ತ ಭತ್ಯೆ ನೀಡಬೇಕು. ಸಹಕಾರ ಇಲಾಖೆ ಮಂಜೂರು ಮಾಡಿದ್ದ 3 ಸಾವಿರ ರೂ ಹಣ 42 ಸಾವಿರ ಆಶಾ ಕಾರ್ಯಕರ್ತೆಯರಲ್ಲಿ 10 ಸಾವಿರ ಮಂದಿಗೆ ಇನ್ನು ಸರಿಯಾಗಿ ದೊರಕಿಲ್ಲ ಎಂದು ದೂರಿದರು.

ಹಕ್ಕೊತ್ತಾಯಗಳು :

1. ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ಮತ್ತು ಗೌರವ ಧನ ಎರಡೂ ಸೇರಿ ತಿಂಗಳಿಗೆ 12 ಸಾವಿರ ರೂ ನೀಡಬೇಕು.

2. ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ತಪಾಸಣೆ ಮಾಡಬೇಕು.

3. ಕೊರೊನಾ ವೈರಸ್ ಪಾಸಿಟಿವ್ ಬಂದರೆ ಉಚಿತ ಚಿಕಿತ್ಸೆ ಜೊತೆಗೆ ಚಿಕಿತ್ಸೆಯ ಅವಧಿಯಲ್ಲಿಯೂ ಸಂಪೂರ್ಣ ಗೌರವ ಧನ ಸಿಗುವಂತೆ ನೋಡಿಕೊಳ್ಳಬೇಕು.

4. ಮಾಸ್ಕ್, ಸ್ಯಾನಿಟೈಜರ್, ಪೇಸ್ ಶೀಲ್ಡ್‌ ಸಮಪರ್ಕವಾಗಿ ನೀಡಬೇಕು.

ABOUT THE AUTHOR

...view details