ಬಳ್ಳಾರಿ: ಅದಿರು ಪೂರೈಕೆ ಪ್ರಕರಣದ ವಿಚಾರಣೆಗೆ ಶಾಸಕ ನಾಗೇಂದ್ರ ಸೇರಿದಂತೆ ಮೂವರು ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಬಳ್ಳಾರಿ ಹಿರಿಯ ಪ್ರಧಾನ ಸಿವಿಲ್ ಮತ್ತು ಸಿಜೆಎಂ ನ್ಯಾಯಾಲಯವು ಶಾಸಕರಿಗೆ ಬಂಧನ ನೋಟಿಸ್ ಜಾರಿ ಮಾಡಿದೆ.
ಅದಿರು ಪೂರೈಸುವುದಕ್ಕೆ ಕಂಪನಿಯೊಂದರಿಂದ 1.96 ಕೋಟಿ ರೂ. ಹಣವನ್ನು ನಾಗೇಂದ್ರ ಮಾಲಿಕತ್ವದ ಕಂಪನಿಗೆ ನೀಡಲಾಗಿತ್ತು. ಆದರೆ ಸಕಾಲಿಕವಾಗಿ ಅದಿರು ಪೂರೈಕೆ ಮಾಡಿಲ್ಲ. ಅದಿರು ಖರೀದಿಗೆ ಹಣ ನೀಡಿದ ಕಂಪನಿ ಬೇರೆಯವರಿಗೆ ಮಾರಾಟವಾಗಿದೆ. ಅದಿರಿಗೆ ಹಣ ನೀಡಿದ ವಿಚಾರದ ಪತ್ರವನ್ನೂ ಹಸ್ತಾಂತರ ಮಾಡಿದ್ದರು. ಆದರೆ, ಅದಿರು ಪೂರೈಕೆ ಮಾಡದೆ, ಅದಿರಿಗೆ ನೀಡಿರುವ ಹಣವನ್ನೂ ವಾಪಸ್ ನೀಡದ ಹಿನ್ನೆಲೆಯಲ್ಲಿ ನಾಗೇಂದ್ರ ಮಾಲಿಕ್ವತದ ಕಂಪನಿಯ ವಿರುದ್ಧ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಲಾಗಿತ್ತು.