ಬಳ್ಳಾರಿ:ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಕಾಲಿಕ ಮರಣ ಅಭಿಮಾನಿಗಳಿಗೆ ಇನ್ನೂ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಅವರು ಮೃತಪಟ್ಟು ವರ್ಷ ಕಳೆಯುತ್ತಾ ಬಂದಿದೆ. ಅಪ್ಪು ಕಣ್ಮರೆಯಾದರು ಪುನೀತ್ ರಾಜಕುಮಾರ್ ಇನ್ನೂ ಅಭಿಮಾನಿಗಳ ಮನಸ್ಸಿನಿಂದ ಮಾಸಿಲ್ಲ. ಅಪ್ಪು ಇನ್ನಿಲ್ಲವಾದರೂ ತಮ್ಮ ನೆಚ್ಚಿನ ನಟ ಹಾಕಿಕೊಟ್ಟ ಮಾರ್ಗದಲ್ಲಿ ಅಭಿಮಾನಿಗಳು ನಡೆಯುತ್ತಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಮ್ಮೊಂದಿಗೆ ಇಲ್ಲದಿದ್ದರೂ ಕೂಡ ಅವರು ಮಾಡಿರುವ ಸಮಾಜಮುಖಿ ಕೆಲಸಗಳು ಎಂದಿಗೂ ಜೀವಂತವಾಗಿದೆ. ಅಪ್ಪು ಮರೆಯಾದ ಬಳಿಕ ಗಣಿ ನಾಡು ಬಳ್ಳಾರಿಯಲ್ಲಿ ಕೃಷ್ಣ ಶಿಲೆಯಲ್ಲಿ ಅವರ ಅದ್ಬುತವಾದ ಪ್ರತಿಮೆ ಹಾಗೂ ಉದ್ಯಾನವನ ನಿರ್ಮಾಣವಾಗಿದೆ. ಬಳ್ಳಾರಿಯ ತಾಳೂರ ರಸ್ತೆಯ ಕುರುವಳ್ಳಿ ಎನ್ ಕ್ಲೈವ್ನಲ್ಲಿ ಸ್ಥಾಪನೆ ಮಾಡಿರುವ ಅಪ್ಪು ಪ್ರತಿಮೆ ಅನಾವರಣಗೊಂಡಿದೆ.
ಪುನೀತ್ ರಾಜಕುಮಾರ್ ಪ್ರತಿಮೆಯನ್ನು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಲೋಕಾರ್ಪಣೆ ಮಾಡಿದ್ದಾರೆ. ಈ ವೇಳೆ, ಪುನೀತ ರಾಜಕುಮಾರ್ ಅವರನ್ನು ನೆನಪಿಸಿಕೊಂಡು ಬಾವುಕರಾದ ರೆಡ್ಡಿ, ಅಪ್ಪು ಜೊತೆಗೆ ತಮ್ಮಗಿದ್ದ ಒಡನಾಟ ವಿವರಿಸಿದರು. ಪುನೀತ್ ರಾಜಕುಮಾರ್ ಮೈಸೂರಿನಲ್ಲಿ ನಡೆಸುತ್ತಿರುವ ಶಕ್ತಿಧಾಮದ ಶಾಖೆಯನ್ನು ಬಳ್ಳಾರಿಯಲ್ಲೂ ಆರಂಭಿಸುವುದಾಗಿ ಘೋಷಣೆ ಮಾಡಿದ್ದರು. ಕೆಎಂಎಫ್ ರಾಯಭಾರಿಯಾಗಿದ್ದ ಅಪ್ಪುವಿನ ಸರಳತೆ ಗುಣಗಾನ ಮಾಡಿದ ಶಾಸಕ ಸೋಮಶೇಖರ ರೆಡ್ಡಿ ಅಪ್ಪು ನಮ್ಮಗೆಲ್ಲರಿಗೂ ಆದರ್ಶವಾಗಿದ್ದಾರೆ ಎಂದು ಸ್ಮರಿಸಿದರು.