ಬಳ್ಳಾರಿ: ಇಲ್ಲಿನ ಮೂರು ಪ್ರಾಜೆಕ್ಟ್ ಇಂಜಿನಿಯರಿಂಗ್ ಹುದ್ದೆಗಳ ನೇಮಕಾತಿಗೆ 750 ಅಭ್ಯರ್ಥಿಗಳು ಹಾಜರಾಗಿದ್ದು, ಜಿಲ್ಲೆಯ ಹೊಸಪೇಟೆ, ಕೂಡ್ಲಿಗಿ, ಸಿರುಗುಪ್ಪ, ಕೊಪ್ಪಳ ತಾಲೂಕಿನ ಗಂಗಾವತಿ, ರಾಯಚೂರಿನ ಸಿಂದನೂರು, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಮತ್ತು ಬೆಂಗಳೂರು ಇನ್ನಿತರ ಸ್ಥಳಗಳಿಂದ ಗುತ್ತಿಗೆ ಆಧಾರದ ಪ್ರಾಜೆಕ್ಟ್ ಇಂಜಿನಿಯರಿಂಗ್ ಹುದ್ದೆಗಳ ನೇಮಕಾತಿ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಿದ್ದಾರೆ.
3 ಪ್ರಾಜೆಕ್ಟ್ ಇಂಜಿನಿಯರಿಂಗ್ ಹುದ್ದೆಗೆ 750 ಅಭ್ಯರ್ಥಿಗಳಿಂದ ಅರ್ಜಿ - 750 candidates apply for the post of Project Engineering
ಖಾಲಿಯಿದ್ದ 3 ಪ್ರಾಜೆಕ್ಟ್ ಇಂಜಿನಿಯರಿಂಗ್ ಹುದ್ದೆಗೆ 750 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ 104 ಅಭ್ಯರ್ಥಿಗಳಿಗೆ ಸಂದರ್ಶನಕ್ಕಾಗಿ ಕರೆಯಲಾಗಿದೆ.

ಗುತ್ತಿಗೆ ಆಧಾರದ 3 ಪ್ರಾಜೆಕ್ಟ್ ಇಂಜಿನಿಯರಿಂಗ್ ಹುದ್ದೆಗೆ 750 ಅಭ್ಯರ್ಥಿಗಳಿಂದ ಅರ್ಜಿ
ಗುತ್ತಿಗೆ ಆಧಾರದ 3 ಪ್ರಾಜೆಕ್ಟ್ ಇಂಜಿನಿಯರಿಂಗ್ ಹುದ್ದೆಗೆ 750 ಅಭ್ಯರ್ಥಿಗಳಿಂದ ಅರ್ಜಿ
ಈ ವೇಳೆ ದೂರವಾಣಿ ಮೂಲಕ ಈಟಿವಿ ಭಾರತ ಜೊತೆ ಮಾತನಾಡಿದ, ಕೇಂದ್ರದ ಪ್ರಾಜೆಕ್ಟ್ ನಿರ್ದೇಶಕ ಮೋಹನ್, ಇಂದು ಇಂಜಿನಿಯರಿಂಗ್ ಮತ್ತು ಎಂಟೆಕ್ ಅರ್ಹತೆ ಇರುವ ಅಭ್ಯರ್ಥಿಗಳಿಗೆ ಪ್ರಾಜೆಕ್ಟ್ ಇಂಜಿನಿಯರ್ ಸಂದರ್ಶನ ನಡೆಯುತ್ತಿದೆ. ಮೂರು ಹುದ್ದೆಗೆ 104 ಅಭ್ಯರ್ಥಿಗಳ ಸಂದರ್ಶನಕ್ಕೆ ಕರೆದಿದ್ದೇವೆ ಎಂದು ತಿಳಿಸಿದ್ದಾರೆ. ಅತಿ ಹೆಚ್ಚು ಅಂಕಗಳಿಸಿದ ಮತ್ತು ಉತ್ತಮ ನಡವಳಿಕೆ ಹೊಂದಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.