ಕರ್ನಾಟಕ

karnataka

ETV Bharat / state

ಉಪ್ಪಾರ ಸಮಾಜಕ್ಕೆ ನಿಗಮ ಮಂಡಳಿ ಅಧ್ಯಕ್ಷ ಹುದ್ದೆ ನೀಡಲು ಒತ್ತಾಯ.. - ಉಪ್ಪಾರ ಮಹಾಸಭಾ ಉಪಾಧ್ಯಕ್ಷ ಬಿ.ಎಂ ಸಿದ್ದೇಶ್ ಕುಮಾರ್

ಜಿಲ್ಲೆಯಲ್ಲಿ 35 ರಿಂದ 40 ಸಾವಿರ ಉಪ್ಪಾರ ಸಮಾಜದವರಿದ್ದಾರೆ. ಆದರೆ, ಜಿಲ್ಲೆಯಲ್ಲಿ ಈವರೆಗೂ ಸಮುದಾಯ ಭವನ ಇಲ್ಲ. ಅಭಿವೃದ್ಧಿ ಸಹ ಆಗುತ್ತಿಲ್ಲ.

Appointment of corporation board chairman for Upara society: Siddesh Kumar
ಉಪ್ಪಾರ ಸಮಾಜಕ್ಕೆ ನಿಗಮ ಮಂಡಳಿ ಅಧ್ಯಕ್ಷರನ್ನು ನೇಮಕ ಮಾಡಿ : ಸಿದ್ದೇಶ್ ಕುಮಾರ್

By

Published : Jun 3, 2020, 7:04 PM IST

Updated : Jun 3, 2020, 7:30 PM IST

ಬಳ್ಳಾರಿ: ಉಪ್ಪಾರ ಸಮಾಜಕ್ಕೆ ನಿಗಮಮಂಡಳಿ ಅಧ್ಯಕ್ಷರನ್ನು ನೇಮಕ ಮಾಡಿ ಎಂದು ಎಂದು ರಾಜ್ಯ ಉಪ್ಪಾರ ಮಹಾಸಭಾ ಉಪಾಧ್ಯಕ್ಷ ಬಿ ಎಂ ಸಿದ್ದೇಶ್‌ಕುಮಾರ್ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಿಜೆಪಿಯ ರಾಜ್ಯಾಧ್ಯಕ್ಷ ಕಟೀಲ್ ಅವರಲ್ಲಿ ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ಉಪ್ಪಾರ ನಿಗಮ ಮಂಡಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದ್ರೇ ಉಪ್ಪಾರ ಜನರ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಅಭಿವೃಧ್ಧಿಗೆ ಅನುಕೂಲವಾಗುತ್ತದೆ. ಹಾಗಾಗಿ ರಾಜ್ಯ ಸರ್ಕಾರ ₹100 ಕೋಟಿ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಉಪ್ಪಾರ ಸಮಾಜಕ್ಕೆ ನಿಗಮ ಮಂಡಳಿ ಅಧ್ಯಕ್ಷ ಹುದ್ದೆ ನೀಡಲು ಒತ್ತಾಯ..

ಬಳ್ಳಾರಿ ಜಿಲ್ಲೆಯಲ್ಲಿ 35 ರಿಂದ 40 ಸಾವಿರ ಉಪ್ಪಾರ ಸಮಾಜದವರಿದ್ದಾರೆ. ಆದರೆ, ಜಿಲ್ಲೆಯಲ್ಲಿ ಈವರೆಗೂ ಸಮುದಾಯ ಭವನ ಇಲ್ಲ. ಅಭಿವೃದ್ಧಿ ಸಹ ಆಗುತ್ತಿಲ್ಲ. ಅದಕ್ಕಾಗಿ ಅಧ್ಯಕ್ಷರನ್ನು ನೇಮಕ ಮಾಡಿ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪಗೆ ಒತ್ತಾಯಿಸಿದರು.

ನಂತರ ಸಂಗನಕಲ್ಲು ಕೃಷ್ಣ ಮಾತನಾಡಿ, ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವಿದ್ದಾಗ ನಿಗಮ ಮಂಡಳಿಯಾಗಿತ್ತು. ಎಂಎಲ್‌ಸಿಗಳನ್ನು ಸಹ ಮಾಡಿದ್ರು. ಆದರೆ, ಬಿಜೆಪಿ ಬಂದ ನಂತರ ಅದಕ್ಕೆ ಅಧ್ಯಕ್ಷರ ನೇಮಕಾತಿಯಾಗಿಲ್ಲ. ಅದಕ್ಕಾಗಿ ಬೇಗೆ ನೇಮಕ ಮಾಡಿ ಉಪ್ಪಾರ ಸಮಾಜಕ್ಕೆ ಅನುಕೂಲ ಮಾಡಿಕೊಡಬೇಕೆಂದರು.

ಹನುಮೇಶ್ ಉಪ್ಪಾರ್​​ ಮಾತನಾಡಿ, ಮುಂದಿನ ದಿನಗಳಲ್ಲಿ ಬಳ್ಳಾರಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ 8 ರಿಂದ 10 ಅಭ್ಯರ್ಥಿಗಳು ಚುನಾವಣೆ ಸ್ಪರ್ಧೆ ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ಸಚಿವ ಶ್ರೀರಾಮುಲು, ಶಾಸಕ ಜಿ ಸೋಮಶೇಖರ್ ರೆಡ್ಡಿ ಅವರಲ್ಲಿಯೂ ಸಹ ಮನವಿ ಮಾಡಿಕೊಂಡಿದ್ದೇವೆ ಎಂದರು.

Last Updated : Jun 3, 2020, 7:30 PM IST

ABOUT THE AUTHOR

...view details