ಬಳ್ಳಾರಿ:ಸೂಕ್ತ ದಾಖಲೆಗಳಿದ್ದರೆ ಮಾತ್ರ ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಯಾವುದೇ ಸ್ಥಿರಾಸ್ತಿಗೆ ಸಂಬಂಧಿಸಿದಂತೆ ಅರ್ಜಿ ನಮೂನೆ 2 ಅಥವಾ 3ನ್ನು ಕೊಡಲು ಬರುತ್ತದೆ ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಸ್ಪಷ್ಟಪಡಿಸಿದ್ದಾರೆ.
ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಸ್ಪಷ್ಟನೆ ಈ ಕುರಿತಂತೆ ಈಟಿವಿ ಭಾತರದ ಜೊತೆ ಮಾತನಾಡಿದ ಅವರು, ಸ್ಥಿರಾಸ್ತಿಗೆ ಸಂಬಂಧಿಸಿದಂತೆ ಖಾತಾ ದಾಖಲೆಗಳನ್ನು ಮಹಾನಗರ ಪಾಲಿಕೆಯು ಅರ್ಜಿ ನಮೂನೆಯ 2 ಅಥವಾ 3ನ್ನು ನೀಡುವ ವೇಳೆಗೆ ಕಡ್ಡಾಯವಾಗಿ ಸೂಕ್ತ ದಾಖಲೆಗಳನ್ನು ಸ್ವೀಕರಿಸಿ ಇ- ಖಾತಾದಲ್ಲಿ ಅಪ್ಲೋಡ್ ಮಾಡಿಯೇ ನೀಡಬೇಕಾಗಿರುತ್ತದೆ. ಹೀಗಾಗಿ ಸಾರ್ವಜನಿಕರು ಪಾಲಿಕೆಯೊಂದಿಗೆ ಸಹಕರಿಸಬೇಕು ಎಂದರು.
ಸ್ಥಿರಾಸ್ತಿಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಪರಿಗಣನೆಗೆ ತೆಗೆದುಕೊಳ್ಳೋದಿಲ್ಲ. ಯಾರಾದರೂ ಸಲ್ಲಿಸಲು ಪ್ರಯತ್ನಿಸಿದರೆ ಅಂಥವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸ ಬೇಕಾಗುತ್ತದೆ. ಈವರೆಗೂ ಅಂದಾಜು 700ಕ್ಕೂ ಅಧಿಕ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಪ್ರತಿವಾರದಲ್ಲಿ ಅಂದಾಜು 70 ಕ್ಕೂ ಅಧಿಕ ಅರ್ಜಿಗಳು ಬರುತ್ತವೆ. ಅವುಗಳ ಪರಿ ಶೀಲನೆಯ ಜೊತೆ - ಜೊತೆಗೆ ವಿಲೇವಾರಿ ಕೂಡ ತ್ವರಿತಗತಿಯಲ್ಲಿ ಸಾಗುತ್ತಿದೆ ಎಂದರು.
ಸುಖಾಸುಮ್ಮನೆ ಅರ್ಜಿ ನಮೂನೆ 2 ಅಥವಾ 3 ನ್ನು ನೀಡಲು ಮಹಾನಗರ ಪಾಲಿಕೆ ವಿಳಂಬ ನೀತಿ ಅನುಸರಿಸುತ್ತದೆ ಎಂಬ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಇನ್ಮುಂದೆ ಸೂಕ್ತ ದಾಖಲೆಗಳನ್ನು ಸಲ್ಲಿಸಿದರೆ ಮಾತ್ರ ಅರ್ಜಿ ನಮೂನೆ 2 ಅಥವಾ 3 ನ್ನು ನೀಡಲಾಗುವುದು ಎಂದು ಹೇಳಿದರು.