ಕರ್ನಾಟಕ

karnataka

ETV Bharat / state

ಕವಿ ಸಿರಾಜ್ ವಿರುದ್ಧದ ದೇಶದ್ರೋಹ ಪ್ರಕರಣ ಹಿಂಪಡೆಯಿರಿ: ವಕೀಲರ ಒಕ್ಕೂಟದ ಮನವಿ - All India Lawyers Federation

ಆನೆಗೊಂದಿ ಉತ್ಸವದ ಕವಿಗೋಷ್ಠಿಯಲ್ಲಿ ಎನ್​ಆರ್​ಸಿ ವಿರೋಧಿಸಿ ಕವನ ವಾಚನ ಮಾಡಿದ್ದಕ್ಕಾಗಿ ಕೊಪ್ಪಳದ ಕವಿ ಸಿರಾಜ್​ ವಿರುದ್ಧ ದಾಖಲಾಗಿರುವ ದೇಶದ್ರೋಹ ಪ್ರಕರಣವನ್ನು ಹಿಂಪಡೆಯುವಂತೆ ಆಗ್ರಹಿಸಿ ಅಖಿಲ ಭಾರತ ವಕೀಲರ ಒಕ್ಕೂಟ ಜಿಲ್ಲಾ ಸಂಘದಿಂದ ಉಪ ತಹಶೀಲ್ದಾರ್​ಗೆ ಮನವಿ ಸಲ್ಲಿಸಲಾಯಿತು. ​

Appeal for withdrawal of Case against poet Siraj
ವಕೀಲರ ಒಕ್ಕೂಟದ ಮನವಿ

By

Published : Feb 5, 2020, 6:04 PM IST

ಹೊಸಪೇಟೆ : ಕೊಪ್ಪಳದ ಕವಿ ಸಿರಾಜ್ ಮತ್ತು ಬೀದರ್​ ಜಿಲ್ಲೆಯ ಶಾಹಿನ ಶಿಕ್ಷಣ ಸಂಸ್ಥೆ ವಿರುದ್ಧ ದಾಖಲಾಗಿರುವ ದೇಶದ್ರೋಹ ಪ್ರಕರಣವನ್ನು ಹಿಂಪಡೆಯಬೇಕು ಎಂದು ಅಖಿಲ ಭಾರತ ವಕೀಲರ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಎ.ಕರುಣನಿಧಿ ಆಗ್ರಹಿಸಿದ್ದಾರೆ.

ನಗರದಲ್ಲಿ ಕವಿ ಸಿರಾಜ್ ವಿರುದ್ಧ ದೇಶದ್ರೋಹದ ದೂರು ವಾಪಾಸ್​ ಪಡೆಯಬೇಕು ಎಂದು ವಕೀಲರ ಸಂಘದದಿಂದ ಉಪ ತಹಶೀಲ್ದಾರ್​ ಅಮರನಾಥ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

ವಾಚಿಸಿದ ವಿವಾದಿತ ಕವನದಲ್ಲೇನಿತ್ತು?

ಆನೆಗೊಂದಿ ಉತ್ಸವದ ಕವಿಗೋಷ್ಠಿಯಲ್ಲಿ ಕವಿ ಸಿರಾಜ್ ಅವರು ಪೌರತ್ವ (ತಿದ್ದುಪಡಿ) ಕಾಯ್ದೆಯ ಕುರಿತು ಕೇಂದ್ರ ಸರ್ಕಾರಕ್ಕೆ ತಮ್ಮ ಕವಿತೆಯ ಮೂಲಕ ಪ್ರಶ್ನೆ ಮಾಡಿದ್ದರು. "ಆಧಾರ್, ರೇಷನ್ ಕಾರ್ಡ್‌ಗಳ ಕ್ಯೂನಲ್ಲಿ, ಥಂಬಿನ ಸರ್ವರಿನ ಮಂಗನಾಟದಲ್ಲಿ, ಬದುಕನ್ನು ಕಳೆದುಕೊಳ್ಳತ್ತಿರುವರು. ದಾಖಲೆ ಕೇಳುವವನೇ ನಿನ್ನ ದಾಖಲೆ ಯಾವಾಗ ನೀಡುತ್ತಿ" ಎಂದು ಕವಿತೆ ವಾಚನ ಮಾಡಿದ್ದರು. ಅದಕ್ಕಾಗಿ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿತ್ತು. ಅದೇ ರೀತಿ ಬೀದರ್​ ಜಿಲ್ಲೆಯ ಶಾಹಿನ್ ಶಿಕ್ಷಣ ಸಂಸ್ಥೆ ಮುಖ್ಯ ಶಿಕ್ಷಕಿಯ ವಿರುದ್ಧವೂ ಇದೆ ಮಾದರಿಯ ಪ್ರಕರಣ ದಾಖಲಿಸಿದ್ದಾರೆ. ಇದು ಸರಿಯಲ್ಲ, ಸಾಮಾಜಿಕ ಕಳಕಳಿ ಹೊಂದಿರುವ ವ್ಯಕ್ತಿಗಳ ಮೇಲಿನ ದೂರು ಹಿಂಪಡೆಯಬೇಕೆಂದು ಆಗ್ರಹಿಸಿದರು.

ABOUT THE AUTHOR

...view details