ಬಳ್ಳಾರಿ: ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ನಾನಾ ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದ್ದು, ಮೊದ್ಲ ಘಟ್ಟ ಆಂಜನೇಯಸ್ವಾಮಿ ದೇಗುಲವು ಸಂಪೂರ್ಣ ಜಲಾವೃತವಾಗಿದೆ. ಶನಿವಾರವಷ್ಟೇ ಈ ದೇಗುಲದಲ್ಲಿ ವಿಶೇಷ ಪೂಜಾ-ಕೈಂಕರ್ಯಗಳು ನಡೆದಿದ್ದವು.
ನೂರಾರು ಭಕ್ತರು ಕೂಡ ಆಂಜನೇಯ ಸ್ವಾಮಿ ದರ್ಶನ ಪಡೆದಿದ್ದರು. ನಿನ್ನೆ (ಆ.8) ಜಿಲ್ಲೆಯ ಹೂವಿನ ಹಡಗಲಿ ತಹಶೀಲ್ದಾರ್ ವಿಜಯಕುಮಾರ ಅವರು ಮೊದ್ಲಘಟ್ಟ ಆಂಜನೇಯಸ್ವಾಮಿ ದೇಗುಲಕ್ಕೆ ಭೇಟಿ ನೀಡಿ, ನದಿಪಾತ್ರದಲ್ಲಿ ಬಟ್ಟೆ ತೊಳೆಯುತ್ತಿದ್ದ ಮಹಿಳೆಯರು ಹಾಗೂ ಭಕ್ತರಿಗೆ ಪ್ರವಾಹದ ಭೀತಿಯ ಕುರಿತು ಜಾಗೃತಿ ಮೂಡಿಸಿದರು. ಇಂದು ಆಂಜನೇಯ ಸ್ವಾಮಿ ದೇಗುಲವೇ ಭಾಗಶಃ ಮುಳುಗಡೆಯಾಗಿದೆ.