ಹೊಸಪೇಟೆ :ವಿಜಯನಗರ ಜಿಲ್ಲೆಗೆ ನೂತನ ಡಿಸಿಯಾಗಿ ಅನಿರುದ್ದ್ ಶ್ರವಣ್ ಬರಲಿದ್ದಾರೆ. ಆದರೆ, ಇನ್ನೂ ಅಧಿಕೃತ ಆದೇಶವಾಗಿಲ್ಲ. ಈ ಹಿಂದೆ ಅವರು ಬಳ್ಳಾರಿ ಉಪವಿಭಾಗಾಧಿಕಾರಿಗಳಾಗಿ ಕೆಲಸ ಮಾಡಿದ್ದರು. ಎಸ್ಪಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಯಾರು ಬರುತ್ತಾರೆ ಎಂಬುದು ಫೈನಲ್ ಆಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಶಾಸಕ ಸೋಮಶೇಖರ್ ರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸೋಮಶೇಖರ ರೆಡ್ಡಿ ಹಿರಿಯರು, ಅವರು ಏಕವಚನದಲ್ಲಿ ಮಾತನಾಡಲಿ. ನಮ್ಮ ಅಣ್ಣ ಮಾತಾಡದಿದ್ದರೇ, ಮತ್ಯಾರು ಮಾತನಾಡಬೇಕು. ತಮ್ಮನ ಮೇಲೆ ಏಕವಚನದಲ್ಲಿ ಮಾತನಾಡದೇ ಯಾರ ಜೊತೆ ಏಕವಚನದಲ್ಲಿ ಮಾತನಾಡುತ್ತಾರೆ ಎಂದಿದ್ದಾರೆ.