ಕರ್ನಾಟಕ

karnataka

ETV Bharat / state

ಬಳ್ಳಾರಿ ನಗರ: ಜೆಡಿಎಸ್​​ ಅಭ್ಯರ್ಥಿಯಾಗಿ ಅನಿಲ್ ಲಾಡ್ ನಾಮಪತ್ರ ಸಲ್ಲಿಕೆ - assembly election 223

ಮಾಜಿ ಶಾಸಕ ಅನಿಲ್ ಲಾಡ್ ಅವರಿಂದು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

anil-lad-has-submitted-nomination-papers-as-jds-candidate
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ: ಜೆಡಿಎಸ್​​ ಅಭ್ಯರ್ಥಿಯಾಗಿ ಅನಿಲ್ ಲಾಡ್ ನಾಮಪತ್ರ ಸಲ್ಲಿಕೆ

By

Published : Apr 20, 2023, 6:14 PM IST

ಬಳ್ಳಾರಿ:ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ಅನಿಲ್ ಲಾಡ್ ಅವರು ಗುರುವಾರ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮೊದಲು ಕೋಟೆ ಮಲ್ಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರ ಜತೆ ಮಹಾನಗರ ಪಾಲಿಕೆ ಕಚೇರಿಗೆ ಧಾವಿಸಿ ಚುನಾವಣಾಧಿಕಾರಿ, ಪಾಲಿಕೆ ಆಯುಕ್ತ ಎಸ್.ಎನ್.ರುದ್ರೇಶ್ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, "ಜೆಡಿಎಸ್ ಪ್ರಾದೇಶಿಕ ಪಕ್ಷ. ಬೇರೆ ಬೇರೆ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಜನರ ಬೆಂಬಲ ಸಿಕ್ಕಿದೆ. ಇಲ್ಲೂ ಮತದಾರರು ಜೆಡಿಎಸ್‌ಗೆ ಬೆಂಬಲ ಕೊಡಬೇಕು" ಎಂದು ಮನವಿ ಮಾಡಿದರು. ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲ ಪಕ್ಷಗಳು ರೆಡ್ಡಿ ಸಮುದಾಯಕ್ಕೆ ಮಣೆ ಹಾಕಿವೆ. ಭರತ್ ರೆಡ್ಡಿ ಅವರಿಗೆ ಯಾವ ಆಧಾರದಲ್ಲಿ ಟಿಕೆಟ್ ಕೊಟ್ಟಿದ್ದಾರೆ?, ಕಸ ಕ್ಲೀನ್ ಮಾಡಿದ್ದಾರಾ?, ಅಭಿವೃದ್ಧಿ ಮಾಡಿದ್ದಾರಾ" ಎಂದು ಪ್ರಶ್ನಿಸಿದರು.

ಮುಂದುವರೆದು ಮಾತನಾಡಿ, "ನಾನು ಬಳ್ಳಾರಿ ಅಭಿವೃದ್ಧಿ ಮಾಡಿದ್ದರ ಬಗ್ಗೆ ಪುಸ್ತಕವೇ ಇದೆ. ಮುನ್ನಾಭಾಯ್ ಅವರ ಮನವೊಲಿಸಿ ಅವರನ್ನು ಪ್ರಚಾರಕ್ಕೆ ಕರೆದುಕೊಂಡು ಹೋಗುತ್ತೇವೆ. ಎಲ್ಲ ಕ್ಷೇತ್ರಗಳಲ್ಲಿ ಜೆಡಿಎಸ್ ಮತ ಬ್ಯಾಂಕ್ ಇದೆ. ನಾನು ಹೋರಾಟಗಾರ, ನಾನು ಕ್ಷತ್ರಿಯ ಸಮಾಜದವನು, ಶಿವಾಜಿ ಮಹಾರಾಜರ ಪರಂಪರೆ ನಮ್ಮದು, ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಕುಕ್ಕರ್ ಹಂಚಿದಾಗಲೇ ನನಗೆ ಅನುಮಾನ ಬಂತು. ಇದರ ಹಿಂದೆ ಯಾರಿದ್ದಾರೆ ಅಂತ ತಿಳಿದುಕೊಂಡೆ" ಎಂದು ಹೇಳಿದರು.

ನಾಮಪತ್ರಿಕೆ ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಹಳ್ಳಿ ತಾಯಣ್ಣ, ಜಿಲ್ಲಾಧ್ಯಕ್ಷ ಸೋಮಲಿಂಗನಗೌಡ, ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಜೆಡಿಎಸ್​​ನಿಂದ ನಾಮಪತ್ರ ಸಲ್ಲಿಸಿದ ಕೋಡಿಹಳ್ಳಿ ಭೀಮಣ್ಣ:ಬಿಜೆಪಿ ಟಿಕೆಟ್​​ ವಂಚಿತ ಕೋಡಿಹಳ್ಳಿ ಭೀಮಣ್ಣ ಅವರಿಂದು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಈ ಹಿಂದೆ ಬಿಜೆಪಿಯಲ್ಲಿ ಪ್ರಮುಖರಾಗಿದ್ದ ಭೀಮಣ್ಣ ಅವರು ಬಿಜೆಪಿ ಟಿಕೆಟ್​ ಆಕಾಂಕ್ಷಿಯಾಗಿದ್ದರು. ಆದರೆ ಸಚಿವ ಬಿ.ಶ್ರೀರಾಮಲು ಅವರು ಪಕ್ಷಕ್ಕೆ ಸೇರ್ಪಡೆ ಮಾಡಿಸಿದ್ದ ಲೋಕೇಶ್ ಅವರಿಗೆ ಬಿಜೆಪಿ ಟಿಕೆಟ್​​ ಬೆನ್ನಲ್ಲೇ ಬಂಡಾಯ ಎದ್ದ ಭೀಮಣ್ಣ ಇಂದು ಕೂಡ್ಲಿಗಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಹೂವಿನಹಡಗಲಿಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ:ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೃಷ್ಣನಾಯ್ಕ ಇಂದು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಬೃಹತ್​​​ ಮೆರವಣಿ ನಡೆಸಿ ಶಕ್ತಿ ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಹೂವಿನಹಡಗಲಿ ಕ್ಷೇತ್ರದ ಬಿಜೆಪಿ‌ ಟಿಕೆಟ್​​ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಚಂದ್ರನಾಯ್ಕ, ಓದೋಗಂಗಪ್ಪ, ಶಿವಪುರ ಸುರೇಶ್ ಯಾತ್ರೆಯಲ್ಲಿ ಭಾಗಿಯಾಗಿ ಕೃಷ್ಣನಾಯ್ಕ ಅವರಿಗೆ ಸಾಥ್​​ ನೀಡಿದರು. ಜೊತೆಗೆ ಮಾಜಿ ಡಿಸಿಎಂ ಎಂಪಿ ಪ್ರಕಾಶ್ ಅವರ ಪುತ್ರಿ ಎಂಪಿ ಸುಮಾ ವಿಜಯ ಕೂಡ ಭಾಗಿಯಾಗಿದ್ದರು.

ಇದನ್ನೂ ಓದಿ:ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿದ ಸತೀಶ್ ಜಾರಕಿಹೊಳಿ

ABOUT THE AUTHOR

...view details