ಕರ್ನಾಟಕ

karnataka

ETV Bharat / state

ಸಚಿವ ಆನಂದ್​​ ಸಿಂಗ್ ಶಾಸಕ ಸ್ಥಾನಕ್ಕೆ‌ ನೀಡ್ತಾರಾ ರಾಜೀನಾಮೆ?: ಈ ಬಗ್ಗೆ ಕೇಳಿದ್ರೇ ನೋ ಕಮೆಂಟ್ಸ್‌ ಅಂದರು - Anand singh news

ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರನ್ನು ಭೇಟಿ ಮಾಡಿ, ಖಾತೆ ಬಗ್ಗೆ ಮಾತನಾಡಿದ್ದರು. ಈ ನಡುವೆಯೇ ಈಗ ಹೊಸಪೇಟೆಯ ಶಾಸಕರ ಕಚೇರಿ ಬೋರ್ಡ್ ನ್ನು ಕ್ರೇನ್ ಮೂಲಕ ತೆರವು‌ ಮಾಡಲಾಗಿದೆ. ಇದೆಲ್ಲವನ್ನು ಗಮನಿಸುತ್ತಿರುವ ಜನತೆಯಲ್ಲಿ ಸಿಂಗ್​ ಅವರು ರಾಜೀನಾಮೆ ನೀಡುತ್ತಾರೆಯೇ ಎಂಬ ಅನುಮಾನ ಮೂಡುವಂತಾಗಿದೆ..

Anand singh will give resignation?
ಆನಂದ ಸಿಂಗ್ ಶಾಸಕ ಸ್ಥಾನಕ್ಕೆ‌ ನೀಡ್ತಾರಾ ರಾಜೀನಾಮೆ?

By

Published : Aug 10, 2021, 10:35 PM IST

Updated : Aug 10, 2021, 10:45 PM IST

ಹೊಸಪೇಟೆ (ವಿಜಯನಗರ) :ವಿಜಯನಗರ ಕ್ಷೇತ್ರದ ಶಾಸಕ ಆನಂದ್​ ಸಿಂಗ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತು ರಾಜಕೀಯ ವಲಯದಲ್ಲಿ ಗುಮಾನಿ‌ ಎದ್ದಿದೆ. ಇದಕ್ಕೆ ಪುಷ್ಠಿ ನೀಡುವಂತೆ ನಗರದ ರಾಣಿಪೇಟೆಯಲ್ಲಿನ ಶಾಸಕರ ಕಾರ್ಯಾಲಯದ ಬೋರ್ಡ್ ತೆರವುಗೊಳಿಸಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಈಗಾಗಲೇ ಆನಂದ್​ ಸಿಂಗ್ ಅವರು ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದರು.‌ ಅಲ್ಲದೇ, ಬಹಿರಂಗವಾಗಿ ಅಸಮಧಾನ ವ್ಯಕ್ತಪಡಿಸಿದ್ದರು.‌ ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರನ್ನು ಭೇಟಿ ಮಾಡಿ, ಖಾತೆ ಬಗ್ಗೆ ಮಾತನಾಡಿದ್ದರು. ಈ ನಡುವೆಯೇ ಈಗ ಹೊಸಪೇಟೆಯ ಶಾಸಕರ ಕಚೇರಿ ಬೋರ್ಡ್ ನ್ನು ಕ್ರೇನ್ ಮೂಲಕ ತೆರವು‌ ಮಾಡಲಾಗಿದೆ.

ಸಚಿವ ಆನಂದ್​​ ಸಿಂಗ್ ಶಾಸಕ ಸ್ಥಾನಕ್ಕೆ‌ ನೀಡ್ತಾರಾ ರಾಜೀನಾಮೆ?:

ಇನ್ನು, ಸಂಪೂರ್ಣ ಕಚೇರಿ ಬಂದ್ ಮಾಡಲು ಆನಂದ ಸಿಂಗ್ ಮುಂದಾಗಿದ್ದಾರೆ ಎಂದು ತಿಳಿದು‌ ಬಂದಿದೆ. ಈ ಹಿಂದೆಯೂ ಸಮ್ಮಿಶ್ರ ಸರ್ಕಾರದಲ್ಲಿ ಮುನಿಸಿಕೊಂಡು ಆನಂದ ಸಿಂಗ್ ಅವರು ರಾಜೀನಾಮೆ ನೀಡಿದ್ದರು.‌

ನೋ ಕಮೆಂಟ್ಸ್​ :ಆನಂದ್‌ ಸಿಂಗ್ ಅವರು ಕುಟುಂಬ ಸಮೇತ ಹೋಮದಲ್ಲಿ ಪಾಲ್ಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಪುಟ್ಟ ಮಕ್ಕಳು ಆನಂದ್​ ಸಿಂಗ್ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸಪಟ್ಟರು. ಈ ವೇಳೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲು ಸಚಿವ ಆನಂದ್​​ ಸಿಂಗ್ ನಿರಾಕರಿಸಿದರು. ನೋ ಕಮೆಂಟ್ಸ್ ಪ್ಲೀಸ್ ಎಂದು ಹೇಳಿದರು.

Last Updated : Aug 10, 2021, 10:45 PM IST

ABOUT THE AUTHOR

...view details