ಕರ್ನಾಟಕ

karnataka

ETV Bharat / state

ಆನಂದ ಸಿಂಗ್ ಗೆದ್ದ 24 ಗಂಟೆಗಳಲ್ಲಿ ಸಚಿವರಾಗುತ್ತಾರೆ: ಶ್ರೀ ರಾಮುಲು ಭವಿಷ್ಯ - ಭಾರತೀಯ ಜನತಾ ಪಾರ್ಟಿಗೆ ಮತ

ಆನಂದ ಸಿಂಗ್ ವಿಜಯನಗರ ಉಪಚುನಾವಣೆಯಲ್ಲಿ ಗೆದ್ದ ತಕ್ಷಣವೆ ಸಚಿವರಾಗುತ್ತಾರೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಭವಿಷ್ಯ ನುಡಿದ್ದಾರೆ.

ಆನಂದ ಸಿಂಗ್ ಗೆದ್ದ 24 ಗಂಟೆಗಳಲ್ಲಿ ಸಚಿವರಾಗುತ್ತಾರೆ

By

Published : Nov 21, 2019, 11:36 PM IST

ಹೊಸಪೇಟೆ: ಆನಂದ ಸಿಂಗ್ ವಿಜಯನಗರ ಉಪಚುನಾವಣೆಯಲ್ಲಿ ಗೆದ್ದ ತಕ್ಷಣವೆ ಸಚಿವರಾಗುತ್ತಾರೆ. ಹಾಗಾಗಿ ಕ್ಷೇತದ ಜನರು ಅವರನ್ನು ಗೆಲ್ಲಿಸಬೇಕು ಎಂದು ಸಚಿವ ಶ್ರೀರಾಮುಲು ಭವಿಷ್ಯ ನುಡಿದ್ದಾರೆ.

ಪ್ರತಿಯೊಬ್ಬ ಮತದಾರರು ಭಾರತೀಯ ಜನತಾ ಪಾರ್ಟಿಗೆ ಮತವನ್ನು ನೀಡುವುದರ ಮೂಲಕ ಬಹುಮತದಿಂದ ಗೆಲ್ಲಿಸಬೇಕು ಎಂದು ಪ್ರಚಾರವನ್ನು ಮಾಡಿದರು. ಹೊಸಪೇಟೆ ತಾಲೂಕಿನ ಬಸವನದುರ್ಗ ಗ್ರಾಮದಲ್ಲಿ ಸಂಜೆ ಭಾರತೀಯ ಜನತಾ ಪಾರ್ಟಿ ಪ್ರಚಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಆನಂದ ಸಿಂಗ್ ಗೆದ್ದ 24 ಗಂಟೆಗಳಲ್ಲಿ ಸಚಿವರಾಗುತ್ತಾರೆ- ಶ್ರೀರಾಮುಲು

ವಿಜಯನಗರ ಕ್ಷೇತ್ರದ ಆನಂದ‌ ಸಿಂಗ್ ಬಿಜೆಪಿ ಪಕ್ಷಕ್ಕಾಗಿ ತಮ್ಮ ರಾಜೀನಾಮೆಯನ್ನು ನೀಡಿದ್ದಾರೆ. ಅವರಿಂದ ಕರ್ನಾಟಕದಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರವನ್ನು ಮಾಡುತ್ತಿದೆ. ರಾಜ್ಯದ ಉಪಚುನಾವಣೆ ನಡೆಯುವಂತೆ ಎಲ್ಲ ಕ್ಷೇತ್ರಗಳನ್ನು ಗೆಲ್ಲಿಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಮತದಾರರಲ್ಲಿ ಅಭಿಪ್ರಾಯವನ್ನು ಹಂಚಿಕೊಂಡರು.

ABOUT THE AUTHOR

...view details