ಹೊಸಪೇಟೆ: ಸಮ್ಮಿಶ್ರ ಸರ್ಕಾರದಲ್ಲಿ ರಾಜೀನಾಮೆ ಕೊಟ್ಟ 17 ಶಾಸಕರು ಕೂಡ ನಾನಾ ಕಾರಣಗಳಿಂದ ರಾಜೀನಾಮೆ ನೀಡಿದ್ದೇವೆಯೇ ಹೊರತು ಸಚಿವ ಸ್ಥಾನದ ಬೇಡಿಕೆಯಿಂದಲ್ಲ. ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಹಿನ್ನಡೆ ಆಗಿದೆ ಎಂದು ನಾನು ರಾಜೀನಾಮೆ ನೀಡಿದ್ದೆ. ಸಚಿವ ಸ್ಥಾನದ ಬೇಡಿಕೆ ಇರಲಿಲ್ಲ, ಒಂದು ವೇಳೆ ವರಿಷ್ಠರುರು ತೀರ್ಮಾನಿಸಿ ಸಚಿವ ಸ್ಥಾನ ನೀಡಿದರೆ ಬೇಡ ಎನ್ನುವುದಿಲ್ಲ ಎಂದು ಶಾಸಕ ಆನಂದ್ ಸಿಂಗ್ ಹೇಳಿದ್ದಾರೆ.
ಸಚಿವರಾಗ್ಲೇಬೇಕು ಅನ್ನೋ ಆಕಾಂಕ್ಷೆಯಿಂದ ನಾವು ರಾಜೀನಾಮೆ ಕೊಟ್ಟಿರಲಿಲ್ಲ: ಆನಂದ ಸಿಂಗ್ - ಹೊಸಪೇಟೆ ಆನಂದ್ ಸಿಂಗ್ ಸುದ್ದಿ
ಸಮ್ಮಿಶ್ರ ಸರ್ಕಾರದಲ್ಲಿ ರಾಜೀನಾಮೆ ಕೊಟ್ಟ 17 ಶಾಸಕರು ಕೂಡ ನಾನಾ ಕಾರಣಗಳಿಂದ ರಾಜೀನಾಮೆ ನೀಡಿದ್ದೆವು. ಆದ್ರೆ ಸಚಿವ ಸ್ಥಾನದ ಬೇಡಿಕೆಯಿಂದಲೇ ರಾಜೀನಾಮೆ ನೀಡಿರಲಿಲ್ಲ ಎಂದು ವಿಜಯನಗರ ಕ್ಷೇತ್ರದ ಶಾಸಕ ಆನಂದ ಸಿಂಗ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಶಾಸಕ ಆನಂದ್ ಸಿಂಗ್
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಅವರ ತೀರ್ಮಾನಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ. ನಮ್ಮ ರಾಜೀನಾಮೆಯಿಂದ ಬಿಜೆಪಿ ಸರ್ಕಾರ ರಚನೆಯಾಗಿದೆ. ಮುಖ್ಯಮಂತ್ರಿ ಅವರು ನಮಗೆ ಯಾವುದೇ ರೀತಿಯ ಅನ್ಯಾಯ ಮಾಡುವುದಿಲ್ಲ ಎನ್ನುವ ನಂಬಿಕೆ ನಮಗಿದೆ. ಅವರು ಯಾವುದೇ ಸ್ಥಾನ ಕೊಟ್ಟರೂ ಅದನ್ನು ಸ್ವೀಕರಿಸುತ್ತೇವೆ ಎಂದರು.
Last Updated : Jan 27, 2020, 4:46 PM IST