ಹೊಸಪೇಟೆ: ವಿಜಯನಗರ ಸಾಮ್ರಾಜ್ಯದ ಸ್ಥಾಪಕ ಯಾರು ಎಂಬ ಪ್ರಶ್ನೆಗೆ ವಿದ್ಯಾರ್ಥಿಯೋರ್ವ ಆನಂದ್ ಸಿಂಗ್ ಎಂದು ಉತ್ತರ ಬರೆದ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರು ಯಾರು? ವಿದ್ಯಾರ್ಥಿ ಬರೆದ ಉತ್ತರ ಇದು! - founder of vijayanagara question
ವಿಜಯನಗರ ಸ್ರಾಮಾಜ್ಯದ ಸ್ಥಾಪಕ ಯಾರು ಎಂಬ ಪ್ರಶ್ನೆಯನ್ನು ಪರೀಕ್ಷೆಯಲ್ಲಿ ಕೇಳಲಾಗಿತ್ತು. ಇದಕ್ಕೆ ವಿದ್ಯಾರ್ಥಿಯು 'ಶಾಸಕ ಆನಂದ ಸಿಂಗ್' ಎಂದು ಉತ್ತರಿಸಿದ್ದಾನೆ. ಈ ಉತ್ತರಕ್ಕೆ ಶಾಲಾ ಶಿಕ್ಷಕರು ಸರಿ ಎಂಬ ಗುರುತು ಹಾಕಿ ಅಚ್ಚರಿ ಮೂಡಿಸಿದ್ದಾರೆ.
ವಿಜಯನಗರ ಸಾಮ್ರಾಜ್ಯ ಸಂಸ್ಥಾಪಕರು ಯಾರು? ವಿದ್ಯಾರ್ಥಿ ಬರೆದ ಉತ್ತರವೇನು ಗೊತ್ತಾ!
ಇದನ್ನೂ ಓದಿ:ಕೊನೆಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ತೆರೆಯಲು ಮಹೂರ್ತ ಫಿಕ್ಸ್
ಹಕ್ಕ ಬುಕ್ಕರು ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರು ಎಂಬುದು ಇತಿಹಾಸ ಪ್ರಸಿದ್ಧಿ ಪಡೆದಿದೆ. ಸಚಿವ ಆನಂದ್ ಸಿಂಗ್ ವಿಜಯನಗರ ನೂತನ ಜಿಲ್ಲೆಯ ರಚನೆಯ ವಿಚಾರವಾಗಿ ಪದೇ ಪದೆ ಹೇಳಿಕೆಗಳನ್ನು ನೀಡುತ್ತಾ ಗಮನ ಸೆಳೆದಿದ್ದರು.