ಕರ್ನಾಟಕ

karnataka

ETV Bharat / state

ಮಗನ ಮದುವೆಗೆ ನಾನು ಯಾವ ಬೆಳ್ಳಿ-ಬಂಗಾರ ನೀಡಿಲ್ಲ: ಆನಂದ್​​ ಸಿಂಗ್​​​ - ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಆನಂದ ಸಿಂಗ್

ಕಾಂಗ್ರೆಸ್ ಪಕ್ಷದಲ್ಲಿದ್ದಾಗ ನಾನು ಶ್ರೀರಾಮಚಂದ್ರನಂತೆ 14 ತಿಂಗಳ ಕಾಲ ವನವಾಸವನ್ನು ಅನುಭವಿಸಿ ಕ್ಷೇತ್ರದ ಹಿತಕ್ಕಾಗಿ ರಾಜೀನಾಮೆ ನೀಡಿದ್ದೇನೆ. ನಾನು ಯಾರಿಗೂ ಯಾವ ಬಂಗಾರವನ್ನು ನೀಡಿಲ್ಲ. ಎಲ್ಲ ಸುಳ್ಳು ಸುದ್ದಿ ಎಂದು ಆನಂದ್ ಸಿಂಗ್ ಹೇಳಿದ್ದಾರೆ.

KN_HPT_3_ANANDI SING_SPEECH_KA10028
ಮಗನ ಮದುವೆಗೆ ನಾನು ಯಾವ ಬೆಳ್ಳಿ ಬಂಗಾರ ನೀಡಿಲ್ಲ: ಆನಂದ್ ಸಿಂಗ್

By

Published : Nov 29, 2019, 9:55 AM IST

ಹೊಸಪೇಟೆ: ಕಾಂಗ್ರೆಸ್ ಪಕ್ಷದಲ್ಲಿದ್ದಾಗ ನಾನು ಶ್ರೀರಾಮಚಂದ್ರನಂತೆ 14 ತಿಂಗಳ ಕಾಲ ವನವಾಸವನ್ನು ಅನುಭವಿಸಿ ಕ್ಷೇತ್ರದ ಹಿತಕ್ಕಾಗಿ ರಾಜೀನಾಮೆ ನೀಡಿದ್ದೇನೆ. ನಾನು ಯಾರಿಗೂ ಯಾವ ಬಂಗಾರವನ್ನು ನೀಡಿಲ್ಲ. ಎಲ್ಲ ಸುಳ್ಳು ಸುದ್ದಿ ಎಂದು ಆನಂದ್ ಸಿಂಗ್ ಹೇಳಿದ್ದಾರೆ.

ಮಗನ ಮದುವೆಗೆ ನಾನು ಯಾವ ಬೆಳ್ಳಿ ಬಂಗಾರ ನೀಡಿಲ್ಲ: ಆನಂದ್ ಸಿಂಗ್

ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಆನಂದ್​​ ಸಿಂಗ್, ಸಮ್ಮೀಶ್ರ ಸರ್ಕಾರದ 14 ತಿಂಗಳ ಕಾಲದ ರಾಜಕೀಯ ‌ಬಾಹುಬಲಿ ಭಾಗ 1 ಆಗಿದೆ. ಇನ್ನುಳಿದ ರಾಜಕೀಯ ಬದಲಾವಣೆ ಬಾಹುಬಲಿ 2 ಎಂದು ಸಿನಿಮಾಕ್ಕೆ ಹೊಲಿಸಿಕೊಂಡರು. ನನ್ನ ಮಗನ ಮದುವೆಗೆ ನಾನು ಯಾವ ಬಂಗಾರ-ಬೆಳ್ಳಿಯನ್ನು ಕೊಟ್ಟಿಲ್ಲ. ಅದು ಸುಳ್ಳು ಸುದ್ದಿಯಾಗಿದೆ. ಬಿಜೆಪಿ ಪಕ್ಷದಲ್ಲಿ ನಾನು ಎರಡು ಬಾರಿ ಶಾಸಕನಾಗಿದ್ದೇನೆ. ಈ ಬಾರಿಯೂ ನಾನೇ ಗೆಲ್ಲುತ್ತೇನೆ ಎಂಬ ನಂಬಿಕೆಯಿದೆ. ನನ್ನ ಕ್ಷೇತ್ರದ ಜನರಿಗಾಗಿ ಅಭಿವೃದ್ಧಿ ಮುಖ್ಯ. ಡಿಸೆಂಬರ್ 9ರವರೆಗೂ ನಾವೆಲ್ಲ ಕಾಯಬೇಕಾಗುತ್ತೆ ಎಂದರು.

ABOUT THE AUTHOR

...view details