ಬಳ್ಳಾರಿ : ಮದ್ಯ ಮಾರಾಟ ಅಂಗಡಿಗಳನ್ನು ಮುಚ್ಚಲು ಮಾರ್ಚ್ 21 ರಿಂದ ಮಾರ್ಚ್ 31 ವರೆಗೆ ಆದೇಶವನ್ನು ಗಣಿನಾಡು ಬಳ್ಳಾರಿ ಅಬಕಾರಿ ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆದ್ರೆ ನಗರದಲ್ಲಿ ಮದ್ಯದಂಗಡಿ ತೆರೆದಿದ್ದು ಸಾರ್ವಜನಿಕರು ಖರೀದಿಗೆ ಆಸಕ್ತಿ ತೋರಿಸಿದ್ರು.
ಆದೇಶ ಧಿಕ್ಕರಿಸಿ ಮದ್ಯದಂಗಡಿ ಓಪನ್; ಗ್ರಾಹಕರಿಂದ ಖರೀದಿ ಜೋರು - ಬಳ್ಳಾರಿಯಲ್ಲಿ ಕೊವೀಡ್-19 ಸಾಂಕ್ರಾಮಿಕ ರೋಗ
ಬಳ್ಳಾರಿಯಲ್ಲಿ ಕೊವಿಡ್-19 ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಮಾ.21ರ ಸಂಜೆ 4 ಗಂಟೆಯಿಂದ ಮಾ.31ರ ವರೆಗೆ ಕ್ಲಬ್‌ಗಳು, ಸಿಎಲ್ 2, ಸಿಎಲ್ 11 ಸನ್ನದುಗಳನ್ನು ಹೊರತುಪಡಿಸಿ ರಾಜ್ಯದ ಎಲ್ಲಾ ಸಿಎಲ್ 4 ರಿಂದ ಸಿಎಲ್ 18ರ ವರೆಗಿನ ವೈನ್ ಟ್ಯಾವರಿನ್, ಪಬ್‌ಗಳನ್ನು ಮುಚ್ಚಲು ಆದೇಶಿಸಲಾಗಿದೆ ಎಂದು ಅಬಕಾರಿ ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊವಿಡ್-19 ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಮಾ.21ರ ಸಂಜೆ 4 ಗಂಟೆಯಿಂದ ಮಾ.31ರವರೆಗೆ ಕ್ಲಬ್‌ಗಳು, ಸಿಎಲ್2, ಸಿಎಲ್11 ಸನ್ನದುಗಳನ್ನು ಹೊರತುಪಡಿಸಿ ರಾಜ್ಯದ ಎಲ್ಲಾ ಸಿಎಲ್4 ರಿಂದ ಸಿಎಲ್18ರ ವರೆಗಿನ ವೈನ್ ಟ್ಯಾವರಿನ್, ಪಬ್‌ಗಳು ಹಾಗೂ ಮೈಕ್ರೊಬ್ರಿವರಿ ಮದ್ಯ ಮಾರಾಟ ಸನ್ನದುಗಳನ್ನು ಮುಚ್ಚಲು ಆದೇಶಿಸಲಾಗಿದೆ ಎಂದು ಅಬಕಾರಿ ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರದ ರೇಡಿಯೋ ಪಾರ್ಕ್ ರಸ್ತೆಯ 1ನೇ ಗೇಟ್ ಸಮೀಪವಿರುವ ಶ್ರೀಸಪ್ತಗಿರಿ ವೈನ್ಸ್ ತೆರೆದಿದ್ದು ಸಾಕಷ್ಟು ಸಾರ್ವಜನಿಕರು ಆಗಮಿಸಿ ಖರೀದಿಗೆ ಸರತಿಯಲ್ಲಿ ನಿಂತು ಫುಟ್ಪಾತ್ನಲ್ಲಿಯೇ ಮಧ್ಯಾಹ್ನ, ಸಂಜೆ, ರಾತ್ರಿ ಸಮಯದಲ್ಲಿ ಮದ್ಯ ಸೇವನೆಯಲ್ಲಿ ತೊಡಗಿದ್ದರು.