ಕರ್ನಾಟಕ

karnataka

ETV Bharat / state

ಬಳ್ಳಾರಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ.. ಗುಂಪು ಗುಂಪಾಗಿ ಸೇರಿದ ನೂರಾರು ಮಂದಿ

ಲಾಕ್​ಡೌನ್ ಆದೇಶ ಇದ್ದರೂ ಕೂಡ ನೂರಾರು ಜನ ಸಾಮಾಜಿಕ ಅಂತರ ಕಾಯ್ದಕೊಳ್ಳದೆ ಗುಂಪು ಗುಂಪಾಗಿ ಸೇರಿ ಅಂಬೇಡ್ಕರ್ ಜಯಂತಿಯಲ್ಲಿ ಪಾಲ್ಗೊಂಡಿದ್ದರು.

ambedkar-jayanti
ಲಾಕ್​ಡೌನ್​ ನಡುವೆ ಗುಂಪು ಗುಂಪಾಗಿ ಸೇರಿದ ನೂರಾರು ಮಂದಿ

By

Published : Apr 14, 2020, 3:19 PM IST

ಬಳ್ಳಾರಿ :ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿಯನ್ನು ನಗರದ ಮೊದಲ ರೈಲ್ವೆ ಗೇಟ್ ಬಳಿಯ ಅಂಬೇಡ್ಕರ್ ಭವನದ ಹತ್ತಿರದ ಅಂಬೇಡ್ಕರ್ ಪ್ರತಿಮೆಗೆ ಜಿಲ್ಲಾಧಿಕಾರಿ ನಕುಲ್​ ಮಾಲಾರ್ಪಣೆ ಮಾಡುವುದರ ಮುಖಾಂತರ ಆಚರಿಸಿದರು.

ನಂತರ ಮಾತನಾಡಿದ ಅವರು, ಕೋವಿಡ್-19 ಹಿನ್ನೆಲೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತಿದೆ. ಈ ದೇಶಕ್ಕೆಅಂಬೇಡ್ಕರ್ ಅವರು ನೀಡಿದ ಕೊಡುಗೆ ಗಮನಾರ್ಹ. ಅವರ ವಿಚಾರಧಾರೆಗಳು ಸದಾ ಕಾಲಕ್ಕೂ ಪ್ರಸ್ತುತ. ಅವರ ವಿಚಾರ ಧಾರೆಗಳು ಮತ್ತು ಆದರ್ಶಗಳನ್ನು ಇಂದು ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದರ ಮೂಲಕ ಪ್ರಚಾರಪಡಿಸುವ ಕೆಲಸ ಮಾಡಬೇಕು ಎಂದರು.

ಲಾಕ್​ಡೌನ್ ಆದೇಶ ಇದ್ದರೂ ಕೂಡ ನೂರಾರು ಜನ ಸಾಮಾಜಿಕ ಅಂತರ ಕಾಯ್ದಕೊಳ್ಳದೆ ಗುಂಪು ಗುಂಪಾಗಿ ಸೇರಿ ಅಂಬೇಡ್ಕರ್ ಜಯಂತಿಯಲ್ಲಿ ಪಾಲ್ಗೊಂಡಿದ್ದರು.

ಲಾಕ್​ಡೌನ್​ ನಡುವೆ ಗುಂಪು ಗುಂಪಾಗಿ ಸೇರಿದ ನೂರಾರು ಮಂದಿ..

ಕಾರ್ಯಕ್ರಮದಲ್ಲಿ ಶಾಸಕ ಸೋಮಶೇಖರ್​ ರೆಡ್ಡಿ, ಜಿಪಂ ಸದಸ್ಯರುಗಳು ಸೇರಿ ವಿವಿಧ ಸಂಘಟನೆಗಳ ಮುಖಂಡರು ಇದ್ದರು.

ABOUT THE AUTHOR

...view details