ಬಳ್ಳಾರಿ:ಅಸರ್ಮಪಕ ಮಳೆ ಕಾರಣ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ.ಹಾಗಾಗಿ ತುಂಗಭದ್ರ ಜಲಾಶಯದಿಂದ ನೀರು ಬಿಡಿಸುವ ಕೆಲಸವನ್ನು ಮಾಡಿ, ರೈತರಿಗೆ ಅನ್ಯಾಯವಾಗುವ ಮುಂಚೆ ಸರ್ಕಾರ ಎಚ್ಚೆತ್ತು ಕೊಳ್ಳಬೇಕೆಂದು ತುಂಗಭದ್ರ ರೈತ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ಈಟಿವಿ ಭಾರತದೊಂದಿಗೆ ಮಾತನಾಡಿದರು.
ತುಂಗಭದ್ರ ಜಲಾಶಯದ ಹೂಳು ತೆಗೆಯಲು ಹಣ ಮೀಸಲಿಡಿ: ರೈತ ಸಂಘದ ಮನವಿ - kannadanews
ಮಳೆಯಿಲ್ಲದ ಕಾರಣ ರೈತರು ಕಂಗಾಲಾಗಿದ್ದು, ತುಂಗಭದ್ರಾ ಜಲಾಶಯದ ಮೂಲಕ ನೀರು ಹರಿಸಬೇಕೆಂದು ತುಂಗಭದ್ರ ರೈತ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ಮನವಿ ಮಾಡಿದ್ದಾರೆ.
ನಗರದ ಖಾಸಗಿ ಹೋಟೆಲ್ ನಲ್ಲಿ ಈಟಿವಿ ಭಾರತ ನೊಂದಿಗೆ ಮಾತನಾಡಿದ ಅವರು ತುಂಗಭದ್ರ ಜಲಾಶಯದಲ್ಲಿ ಇಂದು 17.50 ಟಿಎಂಸಿ ಇದೆ. ಅಂದ್ರೆ 8500 ಕ್ಯೂಸೆಕ್ ನೀರು ಇದೆ ಎಂದರು. ಕರ್ನಾಟಕದಲ್ಲಿ ಆಲಮಟ್ಟಿ ಮತ್ತು ಬಸವಸಾಗರ ಜಲಾಶಯಗಳು ತುಂಬಿ ಆಂಧ್ರಪ್ರದೇಶ ಹರಿದು ಹೋಗುತ್ತಾ ಇದೆ. ಆ ನೀರನ್ನು ನದಿಗಳು ಜೋಡಣೆ ಮೂಲಕವಾಗಿ ತುಂಗಭದ್ರಾ ಜಲಾಶಯಕ್ಕೆ ತರುವ ಪ್ರಯತ್ನ ಆದ್ರೂ ಮಾಡಿ ಎಂದು ಕೇಳಿಕೊಂಡರು.
ತುಂಗಭದ್ರಾ ಜಲಾಶಯದಲ್ಲಿನ ಉಳನ್ನು ಹೊರ ತೆರೆಯಲು ಸರ್ಕಾರದಿಂದ 5 ರಿಂದ 6 ಕೋಟಿ ಹಣವನ್ನು ಮೀಸಲು ಇಡಬೇಕೆಂದು ತಿಳಿಸಿದರು. ಇನ್ನು ಇದೇ ವೇಳೆ ಪ್ರಸ್ತುತ ರಾಜ್ಯ ರಾಜಕೀಯ ಪರಿಸ್ಥಿತಿ ಕುರಿತು ಮಾತನಾಡಿದ ಅವರು ಇಂದಿನ ಸರ್ಕಾರ ಮಕ್ಕಳು ನೋಡುವ ಕಾರ್ಟೂನ್ ಚಾನೆಲ್ ಆಗಿ ನಿರ್ಮಾಣವಾಗಿದೆ ಎಂದು ವ್ಯಂಗ್ಯವಾಡಿದರು. ಮನೆಯಲ್ಲಿ ಮಕ್ಕಳು ಕಾರ್ಟೂನ್ ನೋಡೋದು ಬಿಟ್ಟು ರಿಮೋರ್ಟ್ ಹಿಡಿದು ವಿಧಾನಸೌಧದಲ್ಲಿನ ರಾಜಕೀಯ ಕಚ್ಚಾಟವನ್ನು ವೀಕ್ಷಣೆ ಮಾಡ್ತಾ ಇದ್ದಾರೆ ಎಂದರು. ವಿಧಾನಸೌಧ ಮಕ್ಕಳಿಗೆ ಆಟ ಆಡುವ ವಸ್ತುವಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದ್ರು.