ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಅಪಾರ ಕಾರ್ಯಕರ್ತರೊಂದಿಗೆ ಬೃಹತ್ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಸಿದರು. ಉಗ್ರಪ್ಪ ಅವರಿಗೆ ಪವರ್ ಮಿನಿಸ್ಟರ್ ಸಾಥ್ ನೀಡಿದರು. ಬಳಿಕ ಮಾತನಾಡಿದ ಉಗ್ರಪ್ಪ ದೇಶ ಸಮಗ್ರ ಅಭಿವೃದ್ದಿ ಕಾಣಬೇಕೆಂದರೆ ಸರಕಾರ ಬದಲಾಗಬೇಕು ಎಂದು ಪ್ರತಿಪಾದಿಸಿದರು.
ನಗರದ ಕನಕದುರ್ಗಮ್ಮ ದೇಗುಲದಲಕ್ಕೆ ಭೇಟಿ ನೀಡಿದ ಉಗ್ರಪ್ಪ ಮತ್ತು ಪತ್ನಿ ಮಂಜುಳಮ್ಮ, ಕನಕದುರ್ಗಮ್ಮ ದೇವಿಗೆ ವಿಶೇಷಪೂಜೆ ಸಲ್ಲಿಸಿದರು. ದೇಗುಲದ ಆವರಣದಿಂದ ತೆರೆದ ವಾಹನದಲ್ಲಿ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಸಿದರು.
ರೋಡ್ ಶೋ ವಾಹನವು ತಹಶೀಲ್ದಾರ್ ಕಚೇರಿಯ ಎದುರಿಗೆ ಆಗಮಿಸುತ್ತಿದ್ದಂತೆಯೇ ಒಳಪ್ರವೇಶಿಸಲು ಕಾರ್ಯಕರ್ತರು ಮುಂದಾದರು. ಇದರಿಂದ ಕೆಲಕಾಲ ನೂಕುನುಗ್ಗಲು ಸಹ ಏರ್ಪಟ್ಟಿತ್ತು. ಇದರಿಂದ ಪೊಲೀಸರು ಕೈ ಅಭ್ಯರ್ಥಿ ಉಗ್ರಪ್ಪ ಅವರೊಂದಿಗೆ ಐವರು ಮಾತ್ರ ಕಚೇರಿ ಒಳಗೆ ಪ್ರವೇಶಿಸಲು ಅನುಮತಿ ನೀಡಿದರು.
ಕಿರುಬೆರಳು ತೋರಿಸಿದ ಸಚಿವ ಡಿಕೆಶಿ
ಸಚಿವ ಡಿ.ಕೆ. ಶಿವಕುಮಾರ ಅವರು ಕಿರುಬೆರಳು ತೋರುವ ಮೂಲಕ ವಿಶೇಷ ಗಮನ ಸೆಳೆದರು. ವಿಕ್ಟರಿ ನಮ್ಮದಲ್ಲ. ಅದೇನಿದ್ರೂ ಬಿಎಸ್ವೈ ಅವರದ್ದು. ಎನ್ನುತ್ತಲೇ ಕಿರುಬೆರಳು ತೋರಿಸಿ ಗಮನ ಸೆಳೆದರು.
ಉಗ್ರಪ್ಪ ನಾಮಪತ್ರ ಸಲ್ಲಿಕೆ ವೇಳೆ ಮಾತನಾಡಿದ ಡಿಕೆಶಿ, ಬಳ್ಳಾರಿ ಜಿಲ್ಲೆಯ ಮತದಾರರ ಬಗ್ಗೆ ನನಗೆ ಅಪಾರವಾದ ನಂಬಿಕೆಯಿದೆ. ಬಡತನ, ಶ್ರೀಮಂತಿಕೆ ನಡುವೆ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ, ಅದರ ಸಂಪೂರ್ಣ ನಿರ್ಮೂಲನೆಗೆ ನಾವೆಲ್ಲ ಶ್ರಮಿಸಬೇಕಿದೆ ಎಂದರು.
ಗಣೇಶ್ ಜಾಮೀನು ನಮ್ಮ ಕೈಯಲ್ಲಿಲ್ಲ: ಪವರ್ ಮಿನಿಸ್ಟರ್