ಕರ್ನಾಟಕ

karnataka

ETV Bharat / state

ಬಳ್ಳಾರಿ: ಪೊಲೀಸ್ ಶ್ವಾನಗಳಿಗೆ ಏರ್ ಕೂಲರ್​ ವ್ಯವಸ್ಥೆ - bellary latest update news

ಬಳ್ಳಾರಿಯ ಬಿರುಬಿಸಿಲಿಗೆ ಬೆದರಿರುವ ಪೊಲೀಸ್ ನಾಯಿಗಳು ಬದುಕುಳಿಯೋದೇ ಕಷ್ಟ. ಈ ಕಾರಣಕ್ಕೆ ಪೊಲೀಸರು ತಮ್ಮ ನಾಯಿಗಳಿಗೆ ಏರ್ ಕೂಲರ್ ವ್ಯವಸ್ಥೆ ಮಾಡಿದ್ದಾರೆ.

Air cooler for police dogs
ಪೊಲೀಸ್ ಶ್ವಾನಗಳಿಗೆ ಏರ್ ಕೂಲರ್

By

Published : Apr 10, 2021, 4:40 PM IST

ಬಳ್ಳಾರಿ: ಕಾದು ಕೆಂಡದಂತಿರುವ ಸೂರ್ಯನ ಪ್ರತಾಪಕ್ಕೆ ಗಣಿನಾಡು ಬಳ್ಳಾರಿಯ ಜನತೆ ಬಸವಳಿದು ಹೋಗಿದ್ದಾರೆ. ಮನೆ ಬಿಟ್ಟು ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ. ಮನುಷ್ಯನ ಪಾಡೇ ಹೀಗಿದ್ದರೆ ನಾಯಿಗಳ ಪಾಡು ಇನ್ಹೇಗಿರುತ್ತೆ? ಹಾಗಾಗಿ ಬಳ್ಳಾರಿಯ ಪೊಲೀಸರು ತಮ್ಮ ಇಲಾಖೆಯ ನಾಯಿಗಳನ್ನ ಬಿಸಿಲಿನಿಂದ ಕಾಪಾಡಲು ನಿರ್ಧರಿಸಿದ್ದಾರೆ. ಬಿಸಿಲಿನ ಹೊಡೆತದಿಂದ ತಪ್ಪಿಸಿಕೊಳ್ಳಲು ನಾಯಿಗಳಿಗೆ ಏರ್ ಕೂಲರ್ ವ್ಯವಸ್ಥೆ ಮಾಡಲಾಗಿದೆ.

ಪೊಲೀಸ್ ಶ್ವಾನಗಳಿಗೆ ಏರ್ ಕೂಲರ್

ಬಳ್ಳಾರಿಯ ಡಿಎಆರ್ ಮೈದಾನದ ಕೊಠಡಿಯಲ್ಲಿರುವ ವಿದೇಶಿ ತಳಿಯ ನಾಯಿಗಳಿಗೆ ರಾಯಲ್ ಟ್ರೀಟ್​​ಮೆಂಟ್ ನಡೆಯುತ್ತಿದೆ. ಅದು ಅನಿವಾರ್ಯ ಕೂಡ. ಯಾಕೆಂದ್ರೆ ಬಳ್ಳಾರಿಯ ಬಿರುಬಿಸಿಲಿಗೆ ಬೆದರಿರುವ ಪೊಲೀಸ್ ನಾಯಿಗಳು ಬದುಕುಳಿಯೋದೇ ಕಷ್ಟ. ಈ ಕಾರಣಕ್ಕೆ ಪೊಲೀಸರು ತಮ್ಮ ನಾಯಿಗಳಿಗೆ ಏರ್ ಕೂಲರ್ ವ್ಯವಸ್ಥೆ ಮಾಡಿದ್ದಾರೆ.

ತಂಪಾದ ಹವಾಮಾನ ಹೊಂದಿರುವ ಕೆನಡಾ ಮತ್ತು ಜರ್ಮನಿ ದೇಶಗಳ ಡಾಬರ್ ಮನ್ ಪಿಂಚರ್, ಲ್ಯಾಬ್ರಡಾರ್ ತಳಿಯ ನಾಯಿಗಳಿಗೆ ಬಿಸಿಲು ತಡೆದುಕೊಳ್ಳುವ ಶಕ್ತಿ ಇರೋದಿಲ್ಲ. ಹೀಗಾಗಿ, ಪೊಲೀಸ್ ಇಲಾಖೆಯ ಡಿಎಆರ್ ಮೈದಾನದಲ್ಲಿರುವ 6 ಶ್ವಾನಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಏರ್ ಕೂಲರ್ ವ್ಯವಸ್ಥೆ ಮಾಡಲಾಗಿದೆ.

ಬಳ್ಳಾರಿ ಜಿಲ್ಲೆಯು ಹೇಳಿ ಕೇಳಿ ಬಿರುಬಿಸಿಲಿಗೆ ಫೇಮಸ್ ಆಗಿದೆ. ಪ್ರತಿದಿನ ಸರಾಸರಿ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದೆ. ಮುಂದಿನ ದಿನಗಳಲ್ಲಿ ಬಿಸಿಲಿನ ತಾಪಮಾನ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಈ ಕಾರಣಕ್ಕೆ ಬಳ್ಳಾರಿ ಜನತೆ ಬಿಸಿಲಿನ ಹೊಡೆತಕ್ಕೆ ತತ್ತರಿಸಿದ್ದಾರೆ. ನಾವಾದ್ರೆ ಈ ಬೆವರಿನ ಮೂಲಕ ತಾಪಮಾನ ಕಡಿಮೆ‌ ಮಾಡಿಕೊಳ್ಳಬಹುದಾಗಿದೆ. ಆದರೆ, ಈ ನಾಯಿಗಳು ತಮ್ಮ ಬಾಯಿ ಮೂಲಕ ತಾಪಮಾನವನ್ನ ಕಡಿಮೆ ಮಾಡಿಕೊಳ್ಳುತ್ತವೆ. ಆ ಕಾರಣಕ್ಕಾಗಿಯೇ ಬಿರು ಬೇಸಿಗೆ ಕಾಲದಲ್ಲಿ ಪೊಲೀಸ್ ಇಲಾಖೆಯಲ್ಲಿನ ವಿದೇಶಿ ತಳಿಯ ನಾಯಿಗಳಿಗೆ ಏರ್ ಕೂಲರ್ ಅನಿವಾರ್ಯ ಎನ್ನುತ್ತಾರೆ ಶ್ವಾನಗಳ ಉಸ್ತುವಾರಿ ಹೊತ್ತಿರುವ ಹೊನ್ನೂರಪ್ಪ.

ಇಲ್ಲಿಯ ನಾಯಿಗಳಿಗೆ ಪ್ರತಿದಿನ ಎಳನೀರು ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ದ್ರವ ಪದಾರ್ಥಗಳಾದ ಗ್ಲೂಕೋನ್ ಡಿ ಹಾಗೂ ಶಕ್ತಿವರ್ಧಕಗಳನ್ನು ನೀಡಲಾಗುತ್ತಿದೆ. ಜೊತೆಗೆ ರಾಗಿ ಮಾಲ್ಟ್ ಸೇರಿದಂತೆ ಇನ್ನಿತರ ದ್ರವ ರೂಪದ ಪದಾರ್ಥಗಳನ್ನ ಕೊಡಲಾಗುತ್ತಿದೆ ಎಂದು ಡಿಎಆರ್​ನ ಆರ್​ಪಿಐ ಗೋವಿಂದ ತಿಳಿಸಿದ್ದಾರೆ.

ಬಿಸಿಲಿನ ತಾಪಮಾನದಿಂದ ಪಾರಾಗಲು ಮನುಷ್ಯ ಎಸಿ, ಕೂಲರ್, ಮೊರೆ ಹೋದಂತೆ ಪೊಲೀಸ್ ನಾಯಿಗಳಿಗೂ ಇದೇ ಸೌಲಭ್ಯ ಸಿಗುತ್ತಿದೆ. ಯಾವುದೇ ಅಪರಾಧ ಘಟನೆ ನಡೆದ್ರೂ ಅದನ್ನ ಪತ್ತೆ ಹಚ್ಚಲು ಈ ಶ್ವಾನಗಳು ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ ಇವುಗಳ ಆರೋಗ್ಯದಲ್ಲಿ ಏರುಪೇರು ಆಗದಂತೆ ರಕ್ಷಣೆ ಮಾಡುತ್ತಿರುವ ಪೊಲೀಸರ ಕಾರ್ಯ ಶ್ಲಾಘನೀಯ.

ABOUT THE AUTHOR

...view details