ವಿಜಯನಗರ: ಉತ್ತರ ಕರ್ನಾಟಕದ ಅತಿ ದೊಡ್ಡ ಮೃಗಾಲಯ, ಹಂಪಿ ಕನ್ನಡ ವಿವಿ ಸಮೀಪದ ಅಟಲ್ ಬಿಹಾರಿ ವಾಜಪೇಯಿ ಪ್ರಾಣಿಶಾಸ್ತ್ರೀಯ ಉದ್ಯಾನಕ್ಕೆ ಬಿಹಾರದಿಂದ ವಿಶೇಷ ಅತಿಥಿ ಆಗಮನವಾಗಿದೆ. ಅದೇ ಭೂಮಿಯ ಮೇಲೆ ವಾಸಿಸುವ ಎಲ್ಲ ಪ್ರಾಣಿಗಳಿಗಿಂತಲೂ ಅತ್ಯಂತ ಉದ್ದವಾದ, ಮತ್ತು ದೊಡ್ಡದಾಗಿ ಮೆಲಕುಹಾಕುವ ಪ್ರಾಣಿಯಾಗಿರುವ ಆಫ್ರಿಕಾ ಮೂಲದ ಜಿರಾಫೆ.
4 ವರ್ಷದ ಜಿರಾಫೆಗೆ ಮೈಸೂರು ಮೃಗಾಲಯ ಆಗಮಿಸುವ ಜಿರಾಫೆ ಜೋಡಿ:ಈ ಕುರಿತು ಮಲಪನಗುಡಿಯಲ್ಲಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಸುದ್ದಿಗಾರರೂಂದಿಗೆ ಮಾತನಾಡಿ, ಮೃಗಾಲಯದ ಡಿಸಿಎಫ್ ಕಿರಣ್ ಕುಮಾರ್ ಅವರು ಬಿಹಾರ ಪಟ್ನಾ ಮೃಗಾಲಯದಿಂದ ಜಿರಾಫೆ ತರುವಲ್ಲಿ ಆರು ತಿಂಗಳಿಂದ ಪ್ರಯತ್ನ ಪಟ್ಟಿದ್ದಾರೆ. ಇಲ್ಲಿನ ಮೃಗಾಲಯದಲ್ಲಿ ಜಿರಾಫೆಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ನಾಲ್ಕು ದಿನಗಳ ರಸ್ತೆ ಪ್ರಯಾಣದ ಮೂಲಕ ಬಿಹಾರದಿಂದ ಜಿರಾಫೆ ಕರೆ ತರಲಾಗಿದೆ. 4 ವರ್ಷದ ಈ ಜಿರಾಫೆಗೆ ಮೈಸೂರು ಮೃಗಾಲಯದಿಂದ ಆಗಮಿಸುವ ಮತ್ತೊಂದು ಜಿರಾಫೆ ಜೋಡಿಯಾಗಲಿದೆ ಎಂದು ಮಾಹಿತಿ ನೀಡಿದರು.
ರಾಜ್ಯದ ಮೂರನೇ ಹುಲಿ ಮತ್ತು ಸಿಂಹ ಸಫಾರಿ ಹೊಂದಿರುವ ಮೃಗಾಲಯ:2017ರಲ್ಲಿ ಪ್ರಾರಂಭಿಸಲಾದ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯ ರಾಜ್ಯದ ಮೂರನೇ ಹುಲಿ ಮತ್ತು ಸಿಂಹ ಸಫಾರಿ ಹೊಂದಿರುವ ಸ್ಥಳವಾಗಿದೆ. ಈಗಾಗಲೇ ಉದ್ಯಾನದಲ್ಲಿ ಹುಲಿ, ಸಿಂಹ, ಸ್ಪಾಟರ್ ಜಿಂಕೆ, ಸಾಂಬಾರ್, ಬಾರ್ಕಿಂಗ್ ಜಿಂಕೆ ಮತ್ತು ಇತರ ಪ್ರಾಣಿಗಳಿವೆ. ಮೊಸಳೆಗಳು, ಕತ್ತೆಕಿರುಬ, ಚಿರತೆ, ಕರಡಿ, ಆಮೆ, ನರಿ ಮತ್ತು ಲಂಗೂರ್ ಸೇರಿದಂತೆ 80ಕ್ಕೂ ಹೆಚ್ಚಿನ ಜಾತಿಯ ಪಕ್ಷಿಗಳು ಹಲವಾರು ಪ್ರಾಣಿಗಳಿವೆ. ಇವುಗಳ ಗುಂಪಿಗೆ ಹೊಸದಾಗಿ ಜಿರಾಫೆ ಕೂಡ ಸೇರ್ಪಡೆಯಾಗಿದೆ. ಹೊಸ ಅತಿಥಿಯ ಆಗಮನದಿಂದ ಮೃಗಾಲಯದ ಕಳೆ ಹೆಚ್ಚಿದ್ದು, ಪ್ರಾಣಿ ಪ್ರಿಯರನ್ನು ಆಕರ್ಷಿಸುತ್ತಿದೆ.