ಹೊಸಪೇಟೆ: ವಿಶ್ವವಿಖ್ಯಾತ ಹಂಪಿಗೆ ಬಹುಭಾಷಾ ನಟ ಶ್ರೀಕಾಂತ್ ಭೇಟಿ ನೀಡಿದ್ದು, ಈ ವೇಳೆ ಅವರು ವಿರೂಪಾಕ್ಷೇಶ್ವರನ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ಅರ್ಚಕರು ನಟನನ್ನು ಗೌರವಿಸಿದರು.
ವಿಶ್ವವಿಖ್ಯಾತ ಹಂಪಿಗೆ ಬಹುಭಾಷಾ ನಟ ಶ್ರೀಕಾಂತ್ ಭೇಟಿ - Actor Srikanth visited Hampi
ವಿಶ್ವವಿಖ್ಯಾತ ಹಂಪಿಗೆ ಬಹುಭಾಷಾ ನಟ ಶ್ರೀಕಾಂತ್ ಭೇಟಿ ನೀಡಿದ್ದು, ಇಲ್ಲಿನ ಇತಿಹಾಸ ಪ್ರಸಿದ್ಧ ದೇಗುಲಗಳಿಗೆ ತೆರಳಿ ದರ್ಶನ ಮಾಡಿದರು.
![ವಿಶ್ವವಿಖ್ಯಾತ ಹಂಪಿಗೆ ಬಹುಭಾಷಾ ನಟ ಶ್ರೀಕಾಂತ್ ಭೇಟಿ hoskote](https://etvbharatimages.akamaized.net/etvbharat/prod-images/768-512-9161815-99-9161815-1602590130595.jpg)
ಹಂಪಿಗೆ ಭೇಟಿ ನೀಡಿದ ನಟ ಶ್ರೀಕಾಂತ್
ಶ್ರೀಕಾಂತ್ ದೇವಸ್ಥಾನದ ಎಡಭಾಗದಲ್ಲಿರುವ ಪಂಪಾಂಬಿಕೆ ಹಾಗೂ ಭುವನೇಶ್ವರಿ ದೇವಿಯ ದರ್ಶನ ಪಡೆದರು. ನಂತರ ಕಡಲೆಕಾಳು ಹಾಗೂ ಸಾಸುವೆಕಾಳು ಗಣೇಶ, ಉಗ್ರನರಸಿಂಹ, ಮಹಾನವಮಿ ದಿಬ್ಬ, ರಾಣಿಸ್ನಾನ ಗೃಹ ಸೇರಿದಂತೆ ಇನ್ನಿತರ ಸ್ಮಾರಕಗಳನ್ನು ಕಣ್ತುಂಬಿಕೊಂಡರು.