ಕರ್ನಾಟಕ

karnataka

ETV Bharat / state

ಮಂಡ್ಯದಲ್ಲಿ ಯಾರು ಗೆಲ್ತಾರೆ?... ಜಾಣ ಉತ್ತರ ನೀಡಿದ ಬುಲೆಟ್​ ಪ್ರಕಾಶ್​​ - undefined

ಈ ಬಾರಿ ರಾಜ್ಯದಲ್ಲಿ 22 ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ. ಮಂಡ್ಯದಲ್ಲಿ ಯಾರು ಗೆದ್ದರೂ ಅವರು ಸಿನಿಮಾದವರೇ ಎಂದು ಬಳ್ಳಾರಿಯಲ್ಲಿ ನಟ ಬುಲೆಟ್ ಪ್ರಕಾಶ್ ಹೇಳಿದ್ರು.

ಬುಲೆಟ್ ಪ್ರಕಾಶ್

By

Published : Apr 20, 2019, 5:10 PM IST

ಬಳ್ಳಾರಿ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಯಾರೇ ಗೆದ್ದರೂ ಅವರು ಸಿನಿಮಾದವರೇ ಎಂದು ಹಾಸ್ಯ ನಟ ಬುಲೆಟ್ ಪ್ರಕಾಶ್​ ಅಭಿಪ್ರಾಯಪಟ್ಟರು.

ನಗರದ ಸಿರುಗುಪ್ಪ ರಸ್ತೆಯ ಹವಂಬಾವಿ ಪ್ರದೇಶದಲ್ಲಿರುವ ಶಾಸಕ ಬಿ.ಶ್ರೀರಾಮುಲು ನಿವಾಸದಲ್ಲಿಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಇದರಲ್ಲಿ ನನ್ನ ಯಾಕೆ ಎಳೆಯುತ್ತೀರಾ? ಯಾರೇ ಗೆದ್ದರೂ ಅವರು ಸಿನಿಮಾದವರಲ್ವಾ ಎಂದು ಜಾಣ ಉತ್ತರ ನೀಡಿದರು.

ಬುಲೆಟ್ ಪ್ರಕಾಶ್

ಮುಂದುವರೆದು ಮಾತನಾಡಿದ ಪ್ರಕಾಶ್​​, ರಾಯಚೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸಿಂಧನೂರು ಹಾಗೂ ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸಿರುಗುಪ್ಪಾದಲ್ಲಿ ಇಂದು ಮತ್ತು ನಾಳೆ ಪ್ರಚಾರ ಕೈಗೊಳ್ಳುವೆ‌. ಬಳ್ಳಾರಿ‌ ಮತ್ತು ಕೊಪ್ಪಳ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆಯಿದೆ. ಪ್ರಧಾನಿ ನರೇಂದ್ರ ಮೋದಿ ಅಲೆ ಮತ್ತು ಶಾಸಕ ಶ್ರೀರಾಮುಲು ಅವರ ಜನಪ್ರಿಯತೆ ಬಳ್ಳಾರಿಯ ಅಭ್ಯರ್ಥಿ ವೈ.ದೇವೇಂದ್ರಪ್ಪನವರ ಗೆಲುವಿಗೆ ಸಹಕಾರಿಯಾಗಲಿದೆ. ಕೊಪ್ಪಳದಲ್ಲಿ ಸಂಗಣ್ಣ ಕರಡಿಯವರು ಗೆದ್ದೇ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

For All Latest Updates

TAGGED:

ABOUT THE AUTHOR

...view details