ಕರ್ನಾಟಕ

karnataka

ETV Bharat / state

ಬಲವಂತವಾಗಿ ಬಂದ್ ಮಾಡಿಸುವವರ ವಿರುದ್ಧ ಕಾನೂನು ಕ್ರಮ: ಆನಂದ್ ಸಿಂಗ್ - ಜಿಲ್ಲಾ ಉಸ್ತುವಾರಿ ಸಚಿವ ಆನಂದ‌‌ ಸಿಂಗ್

ಚಿಕ್ಕ ಜಿಲ್ಲೆಯಾದಷ್ಟು ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಅದಕ್ಕೆ ‌ಜಿಲ್ಲೆ ಮಾಡಲಾಗುತ್ತಿದೆ. ಶಾಸಕ ಸೋಮಶೇಖರ ರೆಡ್ಡಿ ಅವರನ್ನು ಪ್ರಚೋದನೆ ಮಾಡಲಾಗುತ್ತಿದೆ.‌ ಅವರ ಜೊತೆ ಸಿಎಂ ಹಾಗೂ ನಾನು ಕೂಡ ಮಾತನಾಡುತ್ತೇನೆ. ಜಿಲ್ಲೆಯ ವಿಚಾರದಲ್ಲಿ ಯಾರೂ ಕೂಡ ಪ್ರಚೋದನೆ ಮಾಡೋದು ಬೇಡ ಎಂದು ಆನಂದ್​ ಸಿಂಗ್​ ಹೇಳಿದರು.

action-against-forced-bellary-band-anand-singh-said
ಬಲವಂತವಾಗಿ ಬಂದ್ ಮಾಡಿಸಿದವರ ವಿರುದ್ಧ ಕಾನೂನು ಕ್ರಮ: ಆನಂದ್ ಸಿಂಗ್

By

Published : Nov 19, 2020, 5:24 PM IST

ಹೊಸಪೇಟೆ: ಪ್ರಜಾಪ್ರಭುತ್ವದಲ್ಲಿ ‌ಬಂದ್ ಮಾಡಲು ಎಲ್ಲರಿಗೂ ಅವಕಾಶವಿದೆ. ಆದರೆ ಬಲವಂತದಿಂದ ಬಂದ್ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌‌ ಸಿಂಗ್ ಹೇಳಿದರು.

ಬಲವಂತವಾಗಿ ಬಂದ್ ಮಾಡಿಸುವವರ ವಿರುದ್ಧ ಕಾನೂನು ಕ್ರಮ: ಆನಂದ್ ಸಿಂಗ್

ನಗರದಲ್ಲಿಂದು ಅಮರಾವತಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರೊಂದಿಗೆ ಅವರು ಮಾತನಾಡಿದರು. ಯಾರದರೂ ನೂತನ ಜಿಲ್ಲೆ ವಿರುದ್ಧ ಹೋರಾಟ ಮಾಡಬಹುದು, ಅವರಿಗೆ ಬೇಡ ಎನ್ನುವುದಿಲ್ಲ. ಆದರೆ ದೌರ್ಜನ್ಯದಿಂದ ಬಂದ್ ಮಾಡಿದರೆ ಅವರ ವಿರುದ್ಧ ಕ್ರಮ ಗ್ಯಾರಂಟಿ ಎಂದು ತಿಳಿಸಿದರು.

ಚಿಕ್ಕ ಜಿಲ್ಲೆಯಾದಷ್ಟು ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಅದಕ್ಕೆ ‌ಜಿಲ್ಲೆ ಮಾಡಲಾಗುತ್ತಿದೆ. ಶಾಸಕ ಸೋಮಶೇಖರ ರೆಡ್ಡಿ ಅವರನ್ನು ಪ್ರಚೋದನೆ ಮಾಡಲಾಗುತ್ತಿದೆ.‌ ಅವರ ಜೊತೆ ಸಿಎಂ ಹಾಗೂ ನಾನು ಕೂಡ ಮಾತನಾಡುತ್ತೇನೆ. ಜಿಲ್ಲೆಯ ವಿಚಾರದಲ್ಲಿ ಯಾರೂ ಕೂಡ ಪ್ರಚೋದನೆ ಮಾಡೋದು ಬೇಡ ಎಂದರು.

ಜಿಲ್ಲೆಗಳಲ್ಲಿ ತಾಲೂಕುಗಳು ಸೇರ್ಪಡೆ ಇನ್ನೂ ಫೈನಲ್ ಆಗಿಲ್ಲ. ಅಲ್ಲದೆ ಸರ್ಕಾರದಿಂದ ಜಿಲ್ಲಾ ನಕ್ಷೆ ಬಿಡುಗಡೆ ಆಗಿಲ್ಲ. ವಾಟ್ಸಪ್, ಫೇಸ್‌ಬುಕ್​​‌ನಲ್ಲಿ ಹರಿದಾಡುತ್ತಿರುವ ವಿಜಯನಗರ ಜಿಲ್ಲೆ ನಕ್ಷೆ ಬಗ್ಗೆ ತಲೆ ಕಡೆಸಿಕೊಳ್ಳಬಾರದು ಎಂದು‌‌ ಮನವಿ‌ ಮಾಡಿದರು.

ABOUT THE AUTHOR

...view details