ಕರ್ನಾಟಕ

karnataka

ETV Bharat / state

ತಾರಿಹಳ್ಳಿ ವೆಂಕಟೇಶ್​​ ಹತ್ಯೆಗೆ ಮೊದಲೇ ನಡೆದಿತ್ತಾ ಪ್ಲಾನ್​​​.. ರಜಾ ದಿನವೇ ಕೊಲೆಗೆ ಸ್ಕೆಚ್​​​..!

ಕೋರ್ಟ್ ರಜೆ ಇದ್ದರೂ ಸಹ ತಾರಿಹಳ್ಳಿ ವೆಂಕಟೇಶ್ ತಮ್ಮ ಗೆಳೆಯ ವಕೀಲ ಹಾಗೂ ನೋಟರಿ ಮಾಡುವ ಕಲ್ಲಂಭಟ್ ಅವರನ್ನು ಮಾತನಾಡಿಸಲು ಕೋರ್ಟ್​​ಗೆ ಬಂದಿದ್ದಾರೆ.‌ ಈ ಸಮಯದಲ್ಲಿ ಆರೋಪಿ‌ ಮನೋಜ್​ ಬೈಕ್​​​ನಲ್ಲಿ ಬಂದಿದ್ದಾನೆ. ಹಿಂಬದಿಯಿಂದ ಬಂದ ಮನೋಜ್ ತಾರಿಹಳ್ಳಿ ವೆಂಕಟೇಶ್ ಅವರನ್ನು ಮಚ್ಚಿನಿಂದ 10 ಬಾರಿ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾನೆ.

Plan to assassinate Tarihalli Venkatesh in Holiday
ತಾರಿಹಳ್ಳಿ ವೆಂಕಟೇಶ್​​ ಹತ್ಯೆಗೆ ಮೊದಲೇ ನಡೆದಿತ್ತಾ ಪ್ಲಾನ್

By

Published : Feb 27, 2021, 7:58 PM IST

ಹೊಸಪೇಟೆ (ಬಳ್ಳಾರಿ): ನಗರದ ಕೋರ್ಟ್ ಆವರಣದಲ್ಲಿ ಹಾಡುಹಗಲೇ ವ್ಯಕ್ತಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ‌‌ ಮಾಡಿರುವ ಘಟನೆ ನಗರದ ನಿವಾಸಿಗಳಲ್ಲಿ ತಲ್ಲಣ ಹುಟ್ಟಿಸಿದೆ. ಅದೂ ಸಹ ನ್ಯಾಯಾಲಯದ ಆವರಣದಲ್ಲೇ ಕೊಲೆ ನಡೆದಿರುವುದು ಜನತೆ ಭಯಗೊಳ್ಳುವಂತೆ ಮಾಡಿದೆ.

ವಕೀಲ ವೃತ್ತಿ ಮಾಡುತ್ತಿದ್ದ ಕಾಂಗ್ರೆಸ್ ಜಿಲ್ಲಾ ಎಸ್​​ಟಿ ಬ್ಲಾಕ್ ಉಪಾಧ್ಯಕ್ಷ ತಾರಿಹಳ್ಳಿ ವೆಂಕಟೇಶ್​ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು,‌ ಅವರ ಸಹೋದರ ಸಂಬಂಧಿಯೇ ಮಚ್ಚಿನಿಂದ ಕೊಲೆ ಮಾಡಿರುವುದು ಕುಟುಂಬಕ್ಕೆ ಅರಗಿಸಿಕೊಳ್ಳಲಾಗದ ದುರ್ಘಟನೆಯಾಗಿದೆ.

ಘಟನೆ ನಡೆದಿದ್ದು ಹೇಗೆ?

ಇಂದು 4ನೇ ಶನಿವಾರ ಕೋರ್ಟ್ ರಜೆ ಇದ್ದರೂ ಸಹ ತಾರಿಹಳ್ಳಿ ವೆಂಕಟೇಶ್ ತಮ್ಮ ಗೆಳೆಯ ವಕೀಲ ಹಾಗೂ ನೋಟರಿ ಮಾಡುವ ಕಲ್ಲಂಭಟ್ ಅವರನ್ನು ಮಾತನಾಡಿಸಲು ಕೋರ್ಟ್​​ಗೆ ಬಂದಿದ್ದಾರೆ.‌ ಈ ಸಮಯದಲ್ಲಿ ಆರೋಪಿ‌ ಮನೋಜ್​ ಬೈಕ್​​​ನಲ್ಲಿ ಬಂದಿದ್ದಾನೆ. ಹಿಂಬದಿಯಿಂದ ಬಂದ ಮನೋಜ್ ತಾರಿಹಳ್ಳಿ ವೆಂಕಟೇಶ ಅವರನ್ನು ಮಚ್ಚಿನಿಂದ 10 ಬಾರಿ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಇದನ್ನು ಕಂಡ ಪಕ್ಕದಲ್ಲೇ ಕುಳಿತಿದ್ದ ವಕೀಲರು ದಿಕ್ಕಾಪಾಲಾಗಿ ಓಡಿದ್ದಾರೆ.

ತಾರಿಹಳ್ಳಿ ವೆಂಕಟೇಶ್​​ ಹತ್ಯೆಗೆ ಮೊದಲೇ ನಡೆದಿತ್ತಾ ಪ್ಲಾನ್​​​

ಕೊಲೆಗೆ ಪ್ಲಾನ್ ನಡೆದಿತ್ತಾ?

4ನೇ ಶನಿವಾರ ರಜೆ ಇರುವುದರಿಂದ ಪೊಲೀಸರು ಹಾಗೂ ವಕೀಲರು ಯಾರೂ ಇರುವುದಿಲ್ಲ ಎಂಬ ವಿಚಾರ ಅರಿತೇ ಕೊಲೆಗೆ ಮುಂದಾಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಉಳಿದ ದಿನಗಳಲ್ಲಿ ನೂರಾರು ಜನರಿರುತ್ತಾರಲ್ಲದೆ, ಕೋರ್ಟ್ ಗೇಟ್​​ನಲ್ಲಿ ಪೊಲೀಸರು ಸಹ ಇರುತ್ತಾರೆ. ಆದರೆ ರಜಾ ದಿನಗಳಲ್ಲಿ ಪೊಲೀಸರು ಇರುವುದಿಲ್ಲ ಎಂಬುದನ್ನು ಅರಿತೇ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

ಕುಟುಂಬಸ್ಥರ ಆಕ್ರಂದನ

ಬರ್ಬರ ಕೊಲೆಯಾಗಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ತಾರಿಹಳ್ಳಿ ವೆಂಕಟೇಶ್ ಸಹೋದರ ತಾರಿಹಳ್ಳಿ ಆನಂದ್ ಹಾಗೂ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮನೆಯಿಂದ ತಿಂಡಿ ತಿಂದು ಹೊರಬಂದಿದ್ದ ಮಗ ಶವವಾಗಿ ಬಿದ್ದಿರುವುದನ್ನು ಕಂಡು ಕುಟುಂಬಸ್ಥರು ಕಣ್ಣೀರು ಹಾಕಿದರು.

ಇದನ್ನು ಓದಿ:ವಕೀಲನ ಬರ್ಬರ ಹತ್ಯೆ ಪ್ರಕರಣ.. ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಸಚಿವ ಆನಂದ್ ಸಿಂಗ್

ABOUT THE AUTHOR

...view details