ವಿಜಯನಗರ: ಪಾಗಲ್ ಪ್ರೇಮಿಯೊಬ್ಬ ಮಚ್ಚಿನಿಂದ ಪ್ರೇಯಸಿಯ ಹತ್ಯೆ ಮಾಡಿದ್ದಾನೆ. ನಂತರ ರುಂಡದೊಂದಿಗೆ ಠಾಣೆಗೆ ಆಗಮಿಸಿ ಪೊಲೀಸರಿಗೆ ಶರಣಾದ ಭಯಾನಕ ಘಟನೆ ಕೂಡ್ಲಿಗಿ ತಾಲೂಕಿನ ಕನ್ನಬೋರನಯ್ಯನ ಹಟ್ಟಿ ಗ್ರಾಮದಲ್ಲಿ ನಡೆದಿದೆ.
ನಿರ್ಮಲಾ (23) ಕೊಲೆಯಾದ ಯುವತಿ, ಭೋಜರಾಜ ಎಂಬಾತ ಕೊಲೆ ಮಾಡಿದ ವ್ಯಕ್ತಿ. ನಿರ್ಮಲಾ ಹಾಗೂ ಭೋಜರಾಜ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಯುವತಿಯ ಮನೆಯವರು ಒಪ್ಪದ ಪರಿಣಾಮ ಕಳೆದ ಎರಡು ತಿಂಗಳ ಹಿಂದೆಯಷ್ಟೇ ಯುವಕ ಬೇರೆ ಯುವತಿಯೊಂದಿಗೆ ಮದುವೆಯಾಗಿದ್ದ ಎಂದು ತಿಳಿದು ಬಂದಿದೆ.
ರುಂಡದ ಜೊತೆ ಪೊಲೀಸ್ ಠಾಣೆಗೆ ಬಂದ ಘಾತುಕ ಯುವತಿ ಬಿಎಸ್ಸಿ ನರ್ಸಿಂಗ್ ಓದುತ್ತಿದ್ದು, ಕಳೆದ ಮೂರು ದಿನಗಳ ಹಿಂದೆಯಷ್ಟೇ ಪರೀಕ್ಷೆಗಾಗಿ ಓದಲು ಊರಿಗೆ ಆಗಮಿಸಿದ್ದಳು. ಭೋಜರಾಜ ಏಕಾ ಏಕಿ ಯುವತಿಯ ಮನೆಗೆ ನುಗ್ಗಿ ಮಚ್ಚಿನಿಂದ ತಲೆ ಕಡಿದು ಭೀಕರವಾಗಿ ಕೊಲೆ ಮಾಡಿದ್ದಾನೆ. ನಂತರ ತಲೆಯನ್ನು ಬೈಕ್ ನಲ್ಲಿ ಕಾನಾಹೊಸಹಳ್ಳಿ ಠಾಣೆಗೆ ತಂದು ಪೊಲೀಸರಿಗೆ ಶರಣಾಗಿದ್ದಾನೆ. ಘಟನೆಯಿಂದ ಗ್ರಾಮದ ಜನ ಭಯಭೀತಗೊಂಡಿದ್ದಾರೆ.
ಇದನ್ನೂಓದಿ :ರೈಸ್ ಪುಲ್ಲಿಂಗ್ ದಂಧೆಗೂ ಬಂತು ಹೈಟೆಕ್ ಸ್ಪರ್ಶ: ಐವರು ಆರೋಪಿಗಳನ್ನು ಬಂಧಿಸಿದ ಸಿಸಿಬಿ