ಬಳ್ಳಾರಿ:ಆಂಧ್ರಪ್ರದೇಶ ಗಡಿಭಾಗದ ಹೀರೆಹಾಳ್ ಗ್ರಾಮದ ಬಳಿ ಇಂದು ಬೆಳಗ್ಗೆ ಎರಡು ಕೆಎಸ್ಆರ್ಟಿಸಿ ಬಸ್ಗಳ ನಡುವೆ ಅಪಘಾತ ಸಂಭವಿಸಿದ್ದು, ಓರ್ವ ಮೃತಪಟ್ಟಿದ್ದಾರೆ.
ಕೆಎಸ್ಆರ್ಟಿಸಿ ಬಸ್ಗಳ ನಡುವೆ ಅಪಘಾತ: ಓರ್ವ ಸಾವು, ನಾಲ್ವರಿಗೆ ಗಾಯ - ksrtc bus rams another bus
ಕೆಎಸ್ಆರ್ಟಿಸಿ ಬಸ್ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ.
![ಕೆಎಸ್ಆರ್ಟಿಸಿ ಬಸ್ಗಳ ನಡುವೆ ಅಪಘಾತ: ಓರ್ವ ಸಾವು, ನಾಲ್ವರಿಗೆ ಗಾಯ ಕೆಎಸ್ಆರ್ಟಿಸಿ ಬಸ್ಗಳ ನಡುವೆ ಅಪಘಾತ](https://etvbharatimages.akamaized.net/etvbharat/prod-images/768-512-17180062-901-17180062-1670817060750.jpg)
ಕೆಎಸ್ಆರ್ಟಿಸಿ ಬಸ್ಗಳ ನಡುವೆ ಅಪಘಾತ
ರಸ್ತೆ ಉಬ್ಬಿನಲ್ಲಿ ಮುಂದಿನ ಬಸ್ ನಿಧಾನಿಸಿದಾಗ ಹಿಂಬದಿಯಿಂದ ಬಂದ ಮತ್ತೊಂದು ಬಸ್ ಡಿಕ್ಕಿಯಾಗಿದೆ. ಜೊತೆಗೆ ರೋಡ್ ಡಿವೈಡರ್‌ಗೂ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಓರ್ವ ಪ್ರಯಾಣಿಕ ಮೃತಪಟ್ಟಿದ್ದು, ನಾಲ್ಕೈದು ಜನ ಗಾಯಗೊಂಡಿದ್ದಾರೆ. ಗಾಯಾಳುಗಳು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
(ಓದಿ: ಕ್ಯಾಂಟರ್ ಹಾಗೂ ಆಟೋ ನಡುವೆ ಡಿಕ್ಕಿ.. ರಿಕ್ಷಾ ಚಾಲಕ ಸೇರಿ ಮೂವರು ದುರ್ಮರಣ)